ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಶ್ವಾಸಕ್ಕೆ ಅರ್ಹರಾದವರು ಭೋವಿ ಜನಾಂಗ

Lingaraj Badiger
Updated On : 18 Feb 2013, 10:59 am

ಶಿವಮೊಗ್ಗ: ನಂಬಿಕೆ, ವಿಶ್ವಾಸಕ್ಕೆ ಅರ್ಹರಾದವರು ಭೋವಿ ಜನಾಂಗದವರು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಜಿಲ್ಲಾ ಭೋವಿ ಸಮಾಜ ಭಾನುವಾರ ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವ ಮತ್ತು ಜಿಲ್ಲಾ ಮಟ್ಟದ ಭೋವಿ ಸಮಾವೇಶದಲ್ಲಿ ಮಾತನಾಡಿದ ಅವರು, ಭೋವಿ ಜನಾಂಗದವರು ಅಧಿಕ ಶ್ರಮ ಜೀವಿಗಳು, ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿರುವರು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನಲ್ಲಿ ನಂಬಿಕೆ ಇಟ್ಟವರು ಎಂದರು.
ಸಿದ್ದರಾಮೇಶ್ವರ ಸ್ವಾಮೀಜಿಯವರ ತತ್ವ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ  ಸಬಲರಾಗಬೇಕಾದರೆ ಶಿಕ್ಷಣ ಪಡೆಯಬೇಕು ಎಂದರು.
ಜಾಗೃತರಾಗಿ: ನಮ್ಮಂತಹ ಭಾಷಣಕಾರರು ಹೆಚ್ಚಾಗಿದ್ದಾರೆ. ಭಾಷಣದಲ್ಲಿ ನೀಡಿದ ಭರವಸೆಗಳನ್ನು ಸಾರ್ವಜನಿಕರಿಗೆ ನೀಡಿದರೆ ವಿಶ್ವಾಸವಿರುತ್ತಿತ್ತು. ಆದರೆ, ಇದು ರಾಜಕೀಯ ವಿಷಯಗಳನ್ನು ಚರ್ಚೆ ಮಾಡುವ ವೇದಿಕೆಯಲ್ಲ. ಮುಂದಿನ 2-3 ತಿಂಗಳಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಭೋವಿ ಜನಾಂಗದವರು ಜಾಗೃತರಾಗಬೇಕು. ಆದರೂ ನಿಮ್ಮ ಆಶಿರ್ವಾದ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದ್ದರೆ ಸಾಕು ಎಂದರು.
ಪ್ರಾಧ್ಯಾಪಕ ಓಂಕಾರಪ್ಪ ಉಪನ್ಯಾಸ ನೀಡಿ, ಸಿದ್ದರಾಮರು ಯಾವುದೇ ಜಾತಿ ಹಿಂದೆ ಹೋದವರಲ್ಲ. ಬಸವಣ್ಣ, ಸಿದ್ದರಾಮೇಶ್ವರರು ಜಾತಿಯತೆಯನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆರೆ, ಕಟ್ಟೆಗಳು, ಬಾವಿಗಳನ್ನು ತೊಡಿಸಿ ನೀರಿನ ಆಭಾವವನ್ನು ಕಡಿಮೆ ಮಾಡಿದ್ದರು. ಅವರ ತತ್ವಗಳನ್ನು ನಾವಿಂದು ಪಾಲನೆ ಮಾಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾಜಿ ಸಚಿವ ಬಸವಣ್ಯಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್, ಭೋವಿ ಸಮಾಜ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹನುಮಂತಪ್ಪ, ಪುರುಷೋತ್ತಮ್, ದಾಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement