ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಸಿ ವೈಶಾಲಿ ವರ್ಗಾವಣೆ

Lingaraj Badiger
Updated On : 19 Feb 2013, 10:41 am

ಶಿವಮೊಗ್ಗ: ಹಿರಿಯ ಉಪವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಅವರು ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಬೆಳ್ತಂಗಡಿಯಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಸುಮಾ ಕುಮಾರಿ ಅವರು ಭಡ್ತಿ ಹೊಂದಿ ಆಗಮಿಸಿದ್ದಾರೆ.
ಎಂ.ಎಲ್. ವೈಶಾಲಿ ಸೋಮವಾರ ಅಧಿಕಾರ ಹಸ್ತಾಂತರಿಸಿದರು. ನಂತರ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡರು. ಮೂರೂವರೆ ವರ್ಷಗಳ ಕಾಲ ಶಿವಮೊಗ್ಗ ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ವೈಶಾಲಿ ಅವರು ದೇಶೀಯ ವಿದ್ಯಾಶಾಲೆ ಆಡಳಿತಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಈ ಸಂಸ್ಥೆಯ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ನಷ್ಟದಲ್ಲಿದ್ದ ಸಂಸ್ಥೆ ಸ್ವಾವಲಂಬಿಯಾಗಿತ್ತು. ವಿಮಾನ ನಿಲ್ದಾಣ ಜಾಗ ಒತ್ತುವರಿ ತೆರವು, ಎನ್.ಟಿ. ರಸ್ತೆ ಅಗಲೀಕರಣ, ಶರಾವತಿ ನಗರದ ಮೈಕ್ರೋವೇನ್ಸ್ ಸ್ಟೇಷನ್ ರಸ್ತೆ ಅಗಲೀಕರಣ, ಸಾಗರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸ್ವಯಂಪ್ರೇರಿತರಾಗಿ ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement