ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಂಸ್ಕೃತಿಕ ಚಟುವಟಿಕೆಯಿಂದ ಗ್ರಾಮಾಭಿವೃದ್ಧಿ

Lingaraj Badiger
Updated On : 19 Feb 2013, 10:40 am

ಶಿರಾಳಕೊಪ್ಪ:  ಯಾವ ಗ್ರಾಮದಲ್ಲಿ ಸಾಂಸ್ಕ್ರತಿಕ ಚಟುವಟಿಕೆ ಹಾಗು ಕ್ರೀಡಾ ಚಟುವಟಿಕೆಗಳು ನಿರಂತರ ನಡೆಯುತ್ತಿರುತ್ತವೆಯೋ ಆ ಗ್ರಾಮ ಅಭಿವೃದ್ದಿಹೊಂದಲು ಸಾದ್ಯ ಎಂದು ತಾಪಂ ಅಧ್ಯಕ್ಷ ಹನುಮಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಹತ್ತಿರದ ಐತಿಹಾಸಿಕ ಬಳ್ಳಿಗಾವಿ ಗ್ರಾಮದಲ್ಲಿ ಜಿಪಂತಾಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಲ್ಲೂಕ ಯುವಒಕ್ಕೂಟ,ಬಳ್ಳಿಗಾವಿ ವಿವಿದ ಸಂಘಸಂಸ್ಥೆ,ಹಾಗು ಬಳ್ಳಿಗಾವಿ ಗ್ರಾಪಂ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕ ಮಟ್ಟದ ಎರಡು ದಿನದ ಯುವಜನ ಮೇಳದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತೀರ್ಪುಗಾರರಾಗಿದ್ದ ಡಾ.ಬೂದ್ಯಾನಾಯ್ಕ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಯುವಕರಲ್ಲಿ ಹುದಗಿರುವ ಪ್ರತಿಭೆಯನ್ನು ಹೊರಹಾಕಲು ತರಬೇತಿ ಸಿಗುತ್ತಿಲ್ಲ ಎಂದರು.  ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ದಾನಿರುದ್ರಪ್ಪ ಪ್ರಶಸ್ತಿ ವಿತರಿಸಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ನಾಗರಾಜ್, ತಾಪಂ ಸದಸ್ಯ ಈಶ್ವರಪ್ಪ, ಹಾಗು ನಿವ್ರತ್ತಶಿಕ್ಷಕ ಮಲ್ಲಪ್ಪ ಮಾತನಾಡಿದರು.
ಯುವಜನಮೇಳದಲ್ಲಿ ಸಮಗ್ರ ಪ್ರಶಸ್ತಿಯನ್ನು ಎರೇಕೊಪ್ಪ ಗ್ರಾಮದ ಯುವಕ ಮತ್ತು ಯುವತಿ ಸಂಘದವರು ಪಡೆದರು ಹಾಗು ಬಳ್ಳಿಗಾವಿ ಗ್ರಾಮದ ಶಾಂತಲಾ ಯುವತಿ ಸಂಘ ಹೆಚ್ಚಿನ ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದವು. ಅಂಗವಿಕಲನಾಗಿ ವಿಶೇಷ ಪ್ರತಿಭೆ ಹೊಂದಿದ ಬಳ್ಳಿಗಾವಿ ಗ್ರಾಮದ ರವಿಕುಮಾರ ಅವರನ್ನು ಜಿಪಂ ಸದಸ್ಯ ರುದ್ರಪ್ಪ ಸನ್ಮಾನಿಸಿದರು. ವೇದಿಕೆ ಮೇಲೆ ಗ್ರಾಪಂ ಅಧ್ಯಕ್ಷ ರಾಮಣ್ಣ, ಹಾಗು ಎಲ್ಲ ಸದಸ್ಯರು,ತಾಲ್ಲೂಕ ಯುವ ಒಕ್ಕೂಟದ ಅಧ್ಯಕ್ಷ ಅಶ್ವಿನ ಪಾಟೀಲ,ಹಾಗು ಹಲವಾರು ಪ್ರಮುಖರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement