24ರಂದು ಶತರುದ್ರಾಭಿಷೇಕ, ರುದ್ರಹೋಮ
ಶಿವಮೊಗ್ಗ: ಇಲ್ಲಿಗೆ ಸಮೀಪದ ಹೊಸೂಡಿಯಲ್ಲಿ ಅಲ್ಲಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಫೆ.24ರಂದು ಭಾನುವಾರ ಶತರುದ್ರಾಭಿಷೇಕ ಮತ್ತು ರುದ್ರಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಕ್ತರು ಶ್ರೀ ಸ್ವಾಮಿ ಅಭಿಷೇಕಕ್ಕೆ ಹೂವು, ಹಾಲು, ಹಣ್ಣು, ಎಳನೀರು ಮತ್ತು ತೆಂಗಿನಕಾಯಿಗಳನ್ನು ಸಲ್ಲಿಸಬಹುದೆಂದು ದೇವಸ್ಥಾನದ ಸೇವಾ ಸಮಿತಿ ತಿಳಿಸಿದೆ. ದಾನಿಗಳು ತಮ್ಮ ದೇಣಿಗೆಯನ್ನು ಹೊಸೂಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ದೇವಸ್ಥಾನದ ಎಸ್.ಬಿ.ಖಾತೆ ಸಂಖ್ಯೆ 3795101000001 ಇದಕ್ಕೆ ಸಂದಾಯ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9844536601ನ್ನು ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಫೆ. 23 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ವಿಭಾಗದ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.