ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

5 ಸಾವಿರ ಅಡಕೆ ಬೆಳೆಗಾರರ ಮನೆಗೆ ಸೋಲಾರ್

Lingaraj Badiger
Updated On : 23 Feb 2013, 11:14 am

ಸಾಗರ: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ ಸುಮಾರು 5 ಸಾವಿರ ಅಡಕೆ ಬೆಳೆಗಾರರ ಮನೆಗಳಿಗೆ ಮುಂದಿನ ಒಂದು ತಿಂಗಳಿನ ಒಳಗಾಗಿ ಸೋಲಾರ್ ವಿದ್ಯುತ್ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ಹೇಳಿದರು.
 ಇಲ್ಲಿನ ಮ್ಯಾಮ್ಕೋಸ್ ಶಾಖೆಯಲ್ಲಿ ಗುರುವಾರ ಫೆ. 28ರಂದು ನಿವೃತ್ತಿಯಾಗಲಿರುವ ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಕುಮಾರ್ ಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
26ರಂದು ಸಭೆ: ಫೆ. 26 ರಂದು ಮ್ಯಾಮ್ಕೋಸ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯ ಕಲ್ಪಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪ್ರಥಮ ಹಂತದಲ್ಲಿ ಪ್ರತಿ ತಾಲೂಕಿಗೆ ಒಂದು ಸಾವಿರ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದವರು ಹೇಳಿದರು.
ಮಲೆನಾಡು ಭಾಗದಲ್ಲಿ ನಿರಂತರ ವಿದ್ಯುತ್ ಕಡಿತದಿಂದಾಗಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸೋಲಾರ್ ವಿದ್ಯುತ್ ಸೌಲಭ್ಯ ಕಲ್ಪಿಸುವುದರಿಂದ ಅವರು ನಿರಂತರ ಬೆಳಕು ಕಾಣಲು ಸಾಧ್ಯವಿದೆ. ಸೋಲಾರ್ ವಿದ್ಯುತ್ ಸೌಲಭ್ಯ ಪಡೆಯಲು ಆರ್ಥಿಕವಾಗಿ ತೊಂದರೆಯಾಗಲಿರುವ ಕುಟುಂಬಗಳಿಗೆ ಮ್ಯಾಮ್ಕೋಸ್ ನಿಂದ Ú ಸಾಲಸೌಲಭ್ಯ ಕಲ್ಪಿಸಲೂ ಸಹ ಉದ್ದೇಶಿಸಲಾಗಿದೆ ಎಂದರು.
ಪ್ರಾಮಾಣಿಕ ಕಾರ್ಯ: ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರಸನ್ನ ಕುಮಾರ್ ಸ್ವಾಮಿ ಕಳೆದ 6 ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರಿಂದ ಹಲವು ಯೋಜನೆಗಳನ್ನು ಅಡಕೆ ಬೆಳೆಗಾರರ ಪರವಾಗಿ ಜಾರಿಗೆ ತರಲು ಸಾಧ್ಯವಾಗಿದೆ. 73 ವರ್ಷದ ಇತಿಹಾಸ ಹೊಂದಿರುವ ಮ್ಯಾಮ್ಕೋಸ್ ಮೇಲೆ ಯಾವುದೇ ಹಣ ದುರುಪಯೋಗ ಆರೋಪ ಇಲ್ಲದಿರುವುದು ಹಾಗೂ ಸಂಸ್ಥೆ ನಿರಂತರವಾಗಿ ಲಾಭ ತರುತ್ತಿರುವುದು ಬೆಳೆಗಾರರ ವಿಶ್ವಾಸ ಉಳಿಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.
 ಸನ್ಮಾನ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಕುಮಾರ್ ಸ್ವಾಮಿ, ಆಡಳಿತ ಮಂಡಳಿ, ಷೇರುದಾರರ ಹಾಗೂ ಬೆಳೆಗಾರರ ಸಹಕಾರವಿದ್ದರೆ ಸಂಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿ ನಡೆಸಿಕೊಂಡು ಹೋಗಬಹುದು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಸಂಸ್ಥೆ ಉಳಿಯುವ ಜೊತೆಗೆ ಹಲವರಿಗೆ ಆಸರೆಯಾಗುತ್ತದೆ ಎಂದರು.
 ಮ್ಯಾಮ್‌ಕೋಸ್ ನಿರ್ದೇಶಕ ಬಿ.ಎಚ್. ರಾಘವೇಂದ್ರ, ಎಲ್.ಟಿ. ತಿಮ್ಮಪ್ಪ. ಅಶೋಕ ನಾಯಕ್, ಶಶಿಧರ್, ಸುಬ್ರಹ್ಮಣ್ಯ, ವ್ಯವಸ್ಥಾಪಕ ರಾಘವೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement