ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಫ್‌ಪಿಐ ವ್ಯಾಪ್ತಿ ವಿಸ್ತರಿಸಲು ಚಿಂತನೆ

Lingaraj Badiger
Updated On : 23 Feb 2013, 11:14 am

ಶಿವಮೊಗ್ಗ: ಎಫ್‌ಪಿಐ ಸಂಘಟನೆ ಜಿಲ್ಲೆಯಲ್ಲಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಸುಸಜ್ಜಿತ ಆಸ್ಪತ್ರೆಯೊಂದಿಗೆ ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಸಂಚಾರಿ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷೆ ಸುಜಾತ ನಟರಾಜನ್ ಹೇಳಿದರು.
 ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಫ್‌ಪಿಎಐ ಶಿವಮೊಗ್ಗ ಶಾಖೆಯು ಪ್ರತಿವರ್ಷ ಸರಿಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಉತ್ತಮ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
40 ಶಾಖೆ: ಎಫ್‌ಪಿಐ ದೇಶಾದ್ಯಂತ 40 ಶಾಖೆ ಹೊಂದಿದ್ದು, ರಾಜ್ಯದಲ್ಲಿ 10 ಶಾಖೆ ಹೊಂದಿದೆ. ಈ ಪೈಕಿ ಶಿವಮೊಗ್ಗ ಶಾಖೆಯು 1976ರಿಂದ ತನ್ನ ಚಟುವಟಿಕೆ ಆರಂಭಿಸಿತು. ಆರಂಭದಲ್ಲಿ 42 ಹಳ್ಳಿಗಳಲ್ಲಿ ಸೇವೆ ಪ್ರಾರಂಭಿಸಿ ಈಗ 90 ಹಳ್ಳಿಗಳಿಗೆ ವಿಸ್ತರಿಸಿದೆ. 3 ಲಕ್ಷ ಜನ ಸಂಖ್ಯೆಗೆ ಸಮಗ್ರ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ವಿವರಿಸಿದರು.
 ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಪ್ರಜನನ ಆರೋಗ್ಯ ಶಿಕ್ಷಣ, ಜನಸಂಖ್ಯಾ ಶಿಕ್ಷಣ, ಕುಟುಂಬ ಜೀವನ ಶಿಕ್ಷಣ, ಪರಿಸರ ಶಿಕ್ಷಣ, ಹದಿಹರೆಯದ ಶಿಕ್ಷಣ, ಮಾತೃ- ಶಿಶು ಆರೋಗ್ಯ ಶಿಕ್ಷಣ ಮುಂತಾದ ಶೈಕ್ಷಣಿಕ ಕಾರ್ಯಕ್ರಮ ನೀಡಲಾಗುತ್ತಿದೆ ಎಂದರು.
ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಎರಡು ಸಂಚಾರಿ ವೈದ್ಯಕೀಯ ಚಿಕಿತ್ಸಾ ಘಟಕಗಳನ್ನು ನಡೆಸುತ್ತಿದೆ ಎಂದರು.
  ಈ ವರ್ಷದಲ್ಲಿ ಇನ್ನೂ ಕೆಲವು ಸಂಚಾರಿ ಚಿಕಿತ್ಸಾ ಘಟಕಗಳು ಮಂಜೂರಾಗಲಿದ್ದು, ಇವೆಲ್ಲವುಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತದೆ. ತನ್ನ ಸ್ವಯಂ ಸೇವೆಯ ಮೂಲಕ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜನರ ಸಂಸ್ಥೆಯಾಗಿ ಮುಂದುವರೆಯುತ್ತಿದೆ ಎಂದರು.
 ಎಚ್.ಆರ್. ಉಮೇಶ ಆರಾಧ್ಯ, ವಿಶ್ವನಾಥ ಎಂ. ಕೋಳಿವಾಡ, ಮಂಜುಳಾ ವರ್ಮ ಡಾ.ಎಸ್.ಐ. ಬಿರಾದಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement