ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರದ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿ ಸಭೆ

Lingaraj Badiger
Updated On : 23 Feb 2013, 11:14 am

ಶಿವಮೊಗ್ಗ: ನಗರದ ಅಭಿವೃದ್ಧಿ ಬಗ್ಗೆ ಹಾಗೂ ಹಲವು ಕಾಮಗಾರಿ ಲೋಪಗಳ ಬಗ್ಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಶುಕ್ರವಾರ ಸಂಜೆ ನಾಗರೀಕ ಹಿತರಕ್ಷಣಾ ವೇದಿಕೆ ಪ್ರಮುಖರ ಜತೆ ಸಭೆ ನಡೆಸಿದರು.
 9 ವಿವಿಧ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಸ್ತೆ ಹಾಗೂ ಕಟ್ಟಡಗಳ ಗುಣಮಟ್ಟ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದ ಸದಸ್ಯರು, ವಿದ್ಯಾನಗರ ರಸ್ತೆ ಅಗಲೀಕರಣದ ಬಗ್ಗೆ ಅಲ್ಲಿನ ನಿವಾಸಿಗಳಿಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಅವರನ್ನು ಕತ್ತಲಲ್ಲಿಡುವುದು ಸರಿ ಅಲ್ಲ. ಕೂಡಲೇ ಅವರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು.
 ನಗರದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಬಿಡುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕೆಂದು ಆಗ್ರಹಿಸಿದ ಅವರು, ಗಾಂಧಿ ಪಾರ್ಕ್ ಕಾಮಗಾರಿ ಬಗ್ಗೆ, ಹಸರೀಕರಣದ ಬಗ್ಗೆ ಮಾಹಿತಿ ನೀಡದ ನಗರಸಭೆಯ ವಿರುದ್ಧ ಗಂಭೀರ ಆಕ್ಷೇಪಗಳನ್ನು ಮಾಡಿದರು.
 ಸಭೆಯಲ್ಲಿ ವೇದಿಕೆಯ ಕೆ.ವಿ. ವಸಂತಕುಮಾರ್, ಸತೀಶ್, ಅಶೋಕ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement