ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯುವಕರ ಧನಾತ್ಮಕ ಚಿಂತನೆಯಿಂದ ಅಭಿವೃದ್ಧಿ

Lingaraj Badiger
Updated On : 23 Feb 2013, 11:15 am

ಶಿವಮೊಗ್ಗ: ಯುವ ಪೀಳಿಗೆ ಧನಾತ್ಮಕ ಚಿಂತನೆ ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ಎ. ಬಾರಿ ಹೇಳಿದರು.
 ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಶುಕ್ರವಾರ ಬಾಪೂಜಿ ನಗರದ ಮಲೆನಾಡು ದೇವಾಂಗ ಸಂಘ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಒಂದು ದಿನದ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವತಂತ್ರ್ಯ ಬಂದು 66 ವರ್ಷ ಕಳೆದರೂ ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಚಿಂತನೆ ನಡೆಸುತ್ತಿರುವುದು ಆತಂಕ ತಂದಿದೆ ಎಂದರು.
ಸಮಗ್ರ ಪರಿಚಯ: ಇಲ್ಲಿನ ಯುವಕರು ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿನ ಕಲೆ, ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು.  ಇದ್ದರಿಂದ ದೇಶದ ಸಂಸ್ಕೃತಿಯ ಸಮಗ್ರ ಪರಿಚಯವಾಗುತ್ತದೆ ಎಂದ ಅವರು, 21ನೇ ಶತಮಾನದಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ಹೆಚ್ಚಿನ ಮಹತ್ವವಿದೆ. ಭಾರತ ಯುವಕರಿಂದ ಕೂಡಿದ ದೇಶ. ಈ ಶಕ್ತಿ ಹೀಗೆ ಒಗಟ್ಟಿನಿಂದ ಮುಂದುವರೆದರೆ ಭಾರತ ಶಕ್ತಿ ಶಾಲಿ ರಾಷ್ಟವಾಗುವುದರಲ್ಲಿ ಅನುಮಾನವಿಲ್ಲ ಎಂದರು.
 ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ದೇಶದಲ್ಲಿ ಕರ್ನಾಟಕ ಅತ್ಯಂತ ಶಾಂತಿ, ಸೃಜನಶೀಲ ರಾಜ್ಯವಾಗಿದೆ. ಇಲ್ಲಿನ ಕಾನೂನಿಗೆ ಜನ ಸ್ಪಂದಿಸುತ್ತಾರೆ. ಅತ್ಯಂತ ಮೃದು ಸ್ವಾಭಾವದ ಜನರಿದ್ದಾರೆ ಎಂದ ಅವರು, ದೇಶದ ಬೇರೆ, ಬೇರೆ ರಾಜ್ಯಗಳಿಂದ ಯುವ ಸಮೂಹ ಜಿಲ್ಲೆಗೆ ಬಂದು ಸೇರಿರುವುದರಿಂದ ಇಲ್ಲಿನ ಸಂಸ್ಕೃತಿ ತಿಳಿಯುವುದರೊಂದಿಗೆ ಜನರ ಸ್ನೇಹ ಬೆಳೆಯುತ್ತದೆ. ಜಿಲ್ಲೆ ಪ್ರಾಕೃತಿಕವಾಗಿ ಸಮೃದ್ಧಿ ಹೊಂದಿದೆ ಎಂದರು.
 ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯದ ಯುವಕರು ಪಾಲ್ಗೊಂಡಿದ್ದರು.
  ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಮಾನಸಿಕ ರೋಗ ತಜ್ಞ ಡಾ. ಅಶೋಕ ಪೈ, ಕುವೆಂಪು ವಿವಿ ಸಮಾಜ ಕಾರ್ಯವಿಭಾಗದ ರವೀಂದ್ರ ಗಡ್ಕರಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಬಸವರಾಜನ್,  ನಿವೃತ್ತ ಕಾರ್ಯಪಾಲಕ ಅಭಿಯಂತರ ಪಿ.ಆರ್. ಗಿರಿಯಪ್ಪ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement