ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶ್ರೀರಾಮ ಮಂದಿರದಲ್ಲಿ ದಾಸರ ಆರಾಧನೋತ್ಸವ

Lingaraj Badiger
Updated On : 23 Feb 2013, 11:21 am

ಶಿವಮೊಗ್ಗ: ಬಸನಗುಡಿಯ ಗುರುಗುಹ ಸಂಗೀತ ಮಹಾವಿದ್ಯಾಲಯ 23, 24 ಮತ್ತು 25ರಂದು ಜಯನಗರದ ಶ್ರೀ ರಾಮಮಂದಿರದಲ್ಲಿ ಪುರಂದರದಾಸರ ಹಾಗೂ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಏರ್ಪಡಿಸಿದೆ. 23ರಂದು ಸಂಜೆ 5.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರನಾಮಗಳ ಗೋಷ್ಠಿ ಗಾಯನ, ಸಂಜೆ 6.30ಕ್ಕೆ ಕೆ.ಆರ್. ರುಕ್ಮಿಣಮ್ಮ ತಂಡದಿಂದ ಹಾಡುಗಾರಿಕೆ, ಸಂಜೆ 7ಕ್ಕೆ ಹಾಡುಗಾರಿಕೆ ಕಾರ್ಯಕ್ರಮವಿದೆ.
 24ರಂದು ಬೆಳಿಗ್ಗೆ 7 ಗಂಟೆಗೆ ನಗರದ ರವೀಂದ್ರ ನಗರದ ಶ್ರೀ ಗಣಪತಿ ದೇವಸ್ಥಾನದಿಂದ ಜಯನಗರದ ಶ್ರೀ ರಾಮಮಂದಿರದವರೆಗೆ ನಗರ ಸಂಕೀರ್ತನೆ, ಬೆಳಿಗ್ಗೆ 8.30ಕ್ಕೆ ಹೊಸದುರ್ಗ ತಾಲೂಕಿನ ಬೆಲಗೂರು ವೀರಪ್ರತಾಪ ಆಂಜನೇಯ ಸ್ವಾಮಿ, ಮಾರುತಿ ಪೀಠದ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪುಸ್ತಕಗಳ ಲೋಕಾರ್ಪಣೆ ನಡೆಯುವುದು.
ಬೆಳಿಗ್ಗೆ 11ರಿಂದ ಸ್ಥಳೀಯ ಕಲಾವಿದರು, ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ ಎಂದು ಸಂಗೀತ ಮಹಾವಿದ್ಯಾಲಯ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement