ಡಾಂಬರೀಕರಣ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಎಪಿಎಂಸಿ ಡಾಂಬರೀಕರಣದ ವಿರುದ್ಧ ಹೋರಾಟ ಮುಂದುವರಿದಿದೆ. ಅಣ್ಣಾ ಹಜಾರೆ ಹೋರಾಟ ಸಮಿತಿಯವರು ಶನಿವಾರ ಪ್ರತಿಭಟನೆ ನಡೆಸಿ, ಎಪಿಎಂಸಿ ನಿಲುವನ್ನು ಖಂಡಿಸಿದರು.
ಅಣ್ಣಾ ಮಂಪಟದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು ಎಪಿಎಂಸಿ ವಿರುದ್ಧ ಘೋಷಣೆ ಕೂಗಿ ಸಾರ್ವಜನಿಕರಿಗೂ ಈ ವಿಚಾರವಾಗಿ ಜಾಗೃತಿ ಮೂಡಿಸಿದರು.
ಹಣ ದುರುಪಯೋಗ: ಯಾರ್ಡ್ನಲ್ಲಿರುವ ರಸ್ತೆಗಳು ಸುಸ್ಥಿತಿಯಲ್ಲಿದ್ದರೂ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡುತ್ತಿರುವುದರ ಹಿಂದೆ ಅನೇಕ ಅನುಮಾನ ಕಾಡುತ್ತಿದೆ. ಸಲ್ಲದ ಕಾಮಗಾರಿ ನಡೆಸುವ ಮೂಲಕ ಜನರ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.
ಎಚ್.ಆರ್. ಬಸವರಾಜಪ್ಪ, ವಸಂತಕುಮಾರ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.