ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಟಿ ವೈದ್ಯರ ಪಾತ್ರ ಮಹತ್ವದ್ದು: ಪ್ರೊ. ಬಿಎಂಕೆ

Mainashree
Updated On : 24 Feb 2013, 12:25 pm

ತೀರ್ಥಹಳ್ಳಿ: ತಲೆತಲಾಂತರದಿಂದ ಬಂದ ನಾಟೀ ವೈದ್ಯ ಪರಂಪರೆ ಭಾರತದ ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಇಂದಿಗೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಪ್ರೊ. ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಹಾಗೂ ಪುರುಷೋತ್ತಮ ಸಾವಯವ ಕೃಷಿ ಪರಿವಾರ ಸಂಯುಕ್ತವಾಗಿ ಆಯೋಜಿಸಿದ್ದ ಹಸಿರು ಆರೋಗ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಶತ ಮೂವತ್ತು ಜನರು ಅಲೋಪತಿ ಪದ್ಧತಿಯನ್ನು ಬಳಸುತ್ತಿದ್ದರೆ ಪ್ರತಿಶತ ಎಪ್ಪತ್ತು ಜನ ಪರ್ಯಾಯ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ನಾಟಿ ವೈದ್ಯ, ಸಿದ್ಧ, ಯುನಾನಿ, ಹೋಮಿಯೋಪತಿಗಳನ್ನು ಬಳಸುತ್ತಿದ್ದಾರೆ.
ಅನಿವಾರ್ಯ: ಗ್ರಾಮೀಣ ಭಾಗದಲ್ಲಿ ನಾಟೀ ವೈದ್ಯರು ಸೇವಾ ಮನೋಭಾವದಿಂದ ನಿಶ್ಶುಲ್ಕವಾಗಿ ಈ ಕಾರ್ಯ ಕೈಗೊಂಡು ಬರುತ್ತಿದ್ದಾರೆ. ಇಂತಹ ವೈದ್ಯರನ್ನು, ಈ ಪರಂಪರೆಯನ್ನು ಗೌರವಿಸಿ, ಬಳಸಿ, ಬೆಳೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಮರಗಳಲೆ ನರಸಿಂಹಮೂರ್ತಿ ವಹಿಸಿದ್ದರು.
ಮುಖ್ಯ ಅತಿಯಾಗಿ ಭಾಗವಹಿಸಿದ್ದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮತ್ತು ಈ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಂಯೋಜಕ ಬಿ ಎಚ್. ರಾಘವೇಂದ್ರರವರು ಪಶ್ಚಿಮಘಟ್ಟ ಕಾರ್ಯಪಡೆಯ ಚಟುವಟಿಕೆಗಳ ಕಿರುಪರಿಚಯ ಮಾಡಿಕೊಟ್ಟರು. ಪ್ರಾಸ್ತಾವಿಕವಾಗಿ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತ ಅರುಣ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿಗಿ ಆಯುರ್ವೇದ ವೈದ್ಯ ಡಾ. ಗಣೇಶ್ ಕಾಮತ್ ಹಾಗೂ ಸಾಗರದ ಮೂಲಿಕಾ ತಜ್ಞ ಆನೆಗೊಳಿ ಸುಬ್ಬರಾವ್ ಭಾಗವಹಿಸಿದ್ದರು.
ರಾಮಪ್ಪ ಹೆಗಡೆ, ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯೆ ಭಾರತಿ ಹಿರೇಸರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾವಯವ ಕೃಷಿ ಪರಿವಾರದ ಕಾರ್ಯದರ್ಶಿ ಶ್ರೀದತ್ತ ಸರು ಸ್ವಾಗತಿಸಿದರು. ಆಗುಂಬೆ ವಲಯ ಅರಣ್ಯಾಧಿಕಾರಿ ಸುರೇಶ ವಂದಿಸಿದರು. ಸಂಚಾಲಕ ಮಹೇಶ ಬೇಡನಬೈಲು ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement