ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫೋರ್ಟಿಸ್‌ನಲ್ಲಿ ಆಧುನಿಕ ಶಸ್ತ್ರಚಿಕಿತ್ಸೆ ಸೌಲಭ್ಯ

Mainashree
Updated On : 24 Feb 2013, 12:23 pm

ಶಿವಮೊಗ್ಗ: ಫೋರ್ಟಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕನಿಷ್ಠ ಗಾಯದ ಕೊರೊನರಿ ಆರ್ಟಿಯರಿ ಬೈಪಾಸ್ ಗ್ರಾಫ್ಟಿಂಗ್ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹಮ್ಮದ್ ರೇಹಾನ್ ಸಯೀದ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಹೊಸದಾಗಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ಫೋರ್ಟಿಸ್ ಆಸ್ಪತ್ರೆಯ ತಜ್ಞರು ಬೈಪಾಸ್ ಶಸ್ತ್ರಚಿಕಿತ್ಸೆಗಳಲ್ಲಿ ಎಂಐಸಿಎಎಸ್ ತಂತ್ರಜ್ಞಾನ ಬಳಸುತ್ತಿದ್ದಾರೆ. ಈ ಕ್ರಮದಿಂದಾಗಿ ಎದೆಯ ಭಾಗದ ಎಲುಬನ್ನು ಕತ್ತರಿಸುವ ಅವಶ್ಯಕತೆ ಬರುವುದಿಲ್ಲ. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಗಾಯ ಹಾಗೂ ನೋವಿನ ಪ್ರಮಾಣ ಕಡಿಮೆಯಾಗಲಿದ್ದು, ಇದರಿಂದ ರೋಗಿಯ ಜೀವದ ಗುಣಮಟ್ಟ ಸುಧಾರಿಸುತ್ತಿದೆ. ಬೆಂಗಳೂರಿನಂತಹ ನಗರವೊಂದರಲ್ಲೇ ವರ್ಷಕ್ಕೆ ಸುಮಾರು 6 ಸಾವಿರ ಕೊರೊನರಿ ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎಂದರು.
ಸೋಂಕು ಪ್ರಮಾಣ ಕಡಿಮೆ: ನಾನು ಕಳೆದ 5 ವರ್ಷಗಳಿಂದ ಶಸ್ತ್ರಚಿಕಿತ್ಸೆ ಮಾಡುತ್ತ ಬಂದಿದ್ದು, ಕೆಳ ಎದೆಯ ಎಲುಬನ್ನು ಛೇದಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ರೀತಿಯ ಕ್ರಮದಲ್ಲಿ ಸಾವಿನ ಸಂಭವನೀಯತೆಯ ಪ್ರಮಾಣ ಕೇವಲ ಶೇ. 0.2 ಹಾಗೂ ಸೋಂಕು ತಗುಲಬಹುದಾದ ಸಾಧ್ಯತೆಯ ಪ್ರಮಾಣ ಕೇವಲ ಶೇ. 0.3 ಮಾತ್ರ ಇರುತ್ತದೆ ಎಂದು ವಿವರಿಸಿದರು.
ಈ ಶಸ್ತ್ರಚಿಕಿತ್ಸೆಯಲ್ಲಿ ಎದೆಯ ಎಲುಬುಗಳು ಕತ್ತರಿಸುವಿಕೆಯಿಲ್ಲ, ಕಡಿಮೆಗೊಳಿಸಲ್ಪಡುವ ನೋವಿನ ಪ್ರಮಾಣ, ಸೋಂಕುತಗುಲುವ ಅಪಾಯ ಕಡಿಮೆ. ರಕ್ತಸ್ರಾವ ಸಂಭವಿಸುವ ಅಪಾಯ ಕಡಿಮೆ, ಕಡಿಮೆಗೊಳಿಸಲ್ಪಡುವ ತುರ್ತು ಚಿಕಿತ್ಸಾ ಘಟಕ ಹಾಗೂ ಆಸ್ಪತ್ರೆಯ ವಾಸ, ಶಸ್ತ್ರಚಿಕಿತ್ಸಾ ನಂತರ ಸುಧಾರಣೆಗೊಳ್ಳುವ ರಕ್ತನಾಳಗಳ ಚಟುವಟಿಕೆ ಎಂದಿನಂತೆ ಇರುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement