ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುರಂದರದಾಸರ ಆರಾಧನಾ ಮಹೋತ್ಸವ

Lingaraj Badiger
Updated On : 25 Feb 2013, 11:40 am

ಶಿವಮೊಗ್ಗ: ನಗರದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಹಮ್ಮಿಕೊಂಡ ಶ್ರೀ ಪುರಂದರದಾಸರ ಹಾಗೂ ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ವೈಭವವಾಗಿ ನೆರವೇರಿತು.
ಜಯನಗರದ ಶ್ರೀ ರಾಮಮಂದಿರದಲ್ಲಿ ಕಾರ್ಯಕ್ರಮ ನಡೆದಿದ್ದು, ಫೆ.23ರಂದು ವಿದ್ಯಾಲಯದ ಮಕ್ಕಳಿಂದ ದೇವರನಾಮಗಳ ಗೋಷ್ಠಿ ಗಾಯನ, ಹಿರಿಯ ಗಾಯಕಿ ವಿ. ರುಕ್ಮಿಣಮ್ಮ ಹಾಗೂ ವಿ. ಕೃಪಾ ಅವರಿಂದ ಗಾಯನ ಕಾರ್ಯಕ್ರಮ ನೆರವೇರಿತು.
ಸಂಕೀರ್ತನೆ: ಫೆ.24ರ ಭಾನುವಾರ ಮುಂಜಾನೆ ನೂರಾರು ಮಹಿಳೆಯರು ನಗರ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದು, ರವೀಂದ್ರ ನಗರದ ಶ್ರೀ ಗಣಪತಿ ದೇವಸ್ಥಾನದಿಂದ ಜಯನಗರದ ಶ್ರೀ ರಾಮಮಂದಿರದವರೆಗೆ ಸಂಕೀರ್ತನೆ ನಡೆಯಿತು. ಕಳೆದ ಒಂದು ತಿಂಗಳಿಂದ ನಗರದ ವಿವಿಧ ಬಡಾವಣೆಯಲ್ಲಿ ವಿದ್ಯಾಲಯದಿಂದ ನಡೆದಿ ಉಚಿತ ದೇವರನಾಮ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ತಾಯಂದಿರು ಭಜನೆ ಹಾಡುತ್ತಾ ಸಾಗಿದರು.
ನಂತರ ಶ್ರೀ ರಾಮಮಂದಿರದಲ್ಲಿ ಹೊಸದುರ್ಗ ತಾಲೂಕಿನ ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ, ಮಾರುತಿ ಪೀಠದ ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರು ಪೂಜಾವಿಧಿ ನಡೆಸಿದರು. ಇದೇ ಸಂದರ್ಭದಲ್ಲಿ ವಿವಿಧ ಆಧ್ಯಾತ್ಮಿಕ ಪುಸ್ತಕಗಳನ್ನು ಸಹ ಲೋಕಾರ್ಪಣೆ ಮಾಡಿದರು. ನಂತರ ದೇವರ ನಾಮ ಗೋಷ್ಠಿ ಗಾಯನ, ಸ್ಥಳೀಯ ಕಲಾವಿದರು,
ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಹಾಡುಗಾರಿಕೆ, ಶ್ರೀ ಕೃಷ್ಣಮೂರ್ತಿ ಮತ್ತು ವೃಂದದವರ ನಾದಸ್ವರ ವಾದನಗಳೊಂದಿಗೆ ಶ್ರೀ ರಾಮರ ಹಾಗೂ ತ್ಯಾಗರಾಜ ಸ್ವಾಮಿಗಳ ಉತ್ಸವ ಮೂರ್ತಿಗಳ ಅಭಿಮುಖ ಪ್ರಾಕಾರೋತ್ಸವ, ಮಹಾವಿದ್ಯಾನಿಲಯ ವಿದ್ಯಾರ್ಥಿಗಳಿಂದ ಉತ್ಸವ ಸಂಪ್ರದಾಯ ಕೃತಿಗಳ ಗೋಷ್ಠಿ ಗಾಯನ ನಡೆಯಿತು.
ಇಂದು ಕಾರ್ಯಕ್ರಮ: ಫೆ.25ರಂದು ಸಂಜೆ 5.30ಕ್ಕೆ ದೇವರ ನಾಮಗಳ ಗೋಷ್ಠಿ ಗಾಯನ, ಬೆಂಗಳೂರಿನ ಕೋಡಂಪಲ್ಲಿ ಶ್ರೀರಂಜನಿ ತಂಡದಿಂದ ಹಾಡುಗಾರಿಕೆ, ರಾತ್ರಿ 9ಕ್ಕೆ ಮಹಾಮಂಗಳಾರತಿ ಏರ್ಪಡಿಸಲಾಗಿದೆ ಎಂದು ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement