ಬಸ್ ನಿಲ್ದಾಣದಲ್ಲಿ ಅನಾಮಧೇಯ ಶವ ಪತ್ತೆ
ಶಿವಮೊಗ್ಗ: 19ರಂದು ನಗರದ ಖಾಸಗಿ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ 19ರಂದು ಅನಾಮಧೇಯ ವ್ಯಕ್ತಿಯ ಶವ ದೊರೆತಿದೆ.
ಶವದ ಷರಟಿನಲ್ಲಿ ಫೆ.9ರ ಮೆಗ್ಗಾನ್ ಆಸ್ಪತ್ರೆಯ ಒಂದು ಓಪಿಡಿ ಚೀಟಿ ಇದ್ದು, ಅದರಲ್ಲಿ ವೆಂಕಟೇಶ್ (40) ಶಿವಮೊಗ್ಗವೆಂದು ನಮೂದಾಗಿದೆ. ಶವದ ವಾರಸುದಾರರು ಮಾಹಿತಿಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.