ಬೆನ್ನಿಗೆ ಚೂರಿ ಹಾಕಿದವರನ್ನು ಕ್ಷಮಿಸಬೇಡಿ
ಶಿವಮೊಗ್ಗ: ಯಡಿಯೂರಪ್ಪ ಅವರ ಜಾಗದಲ್ಲಿ ನಾನಿದ್ದಿದ್ರೆ ಆತ್ಮಹತ್ಯೆ ಮಾಡಿಕೊಳ್ತಿದ್ದೆ ಅಂತ ಈಶ್ವರಪ್ಪ ಹೇಳಿದ್ದಾರೆಂದರೆ ಅವರು ನನಗೆ ಇನ್ನೆಂಥ ಕಿರುಕುಳ ನೀಡಿರಬೇಕು ಯೋಚನೆ ಮಾಡಿ...
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿ ಸೋಮವಾರ ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರನ್ನು ಕಟು ಮಾತುಗಳಿಂದ ಟೀಕಿಸಿದರು.
ಕ್ಷಮಿಸಬೇಡಿ: ಇಡೀ ಭಾಷಣದಲ್ಲಿ ಅವರು “·æ¬Væ ಚೂರಿ ಹಾಕಿದವರಿಗೆ ಪಾಠ OÚÆÒ’ ಎಂದು ಪದೇಪದೇ ಹೇಳಿ ಬಿಜೆಪಿ ವಿರುದ್ಧ ಹರಿಹಾಯ್ದರು. ನನ್ನ ಬೆನ್ನಿಗೆ ಚೂರಿ ಹಾಕಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ನಿರಪರಾಧಿ ಆದವನನ್ನು ಅಪರಾಧಿ ಮಾಡಿ, ಅಪರಾಧದಿಂದ ಮುಕ್ತನಾದ ಮೇಲೆ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ದೀರಿ. ನಾನು ಸುಮ್ಮನಿರುವುದಿಲ್ಲ. ರಾಜ್ಯದ ಜನರ ಎದುರಿಗೆ ಇದನ್ನು ಬಿಚ್ಚಿಡುತ್ತೇನೆ ಎಂದು ಗುಡುಗಿದರು.
ಬೆನ್ನಿಗೆ ಚೂರಿ ಹಾಕಿದವರು ಇಲ್ಲೇ (ಶಿವಮೊಗ್ಗದಲ್ಲಿ) ದೊಡ್ಡ ಪ್ರಮಾಣದಲ್ಲಿದ್ದಾರೆ. ತೆಂಗಿನಕಾಯಿ ಗುರುತಿಗೆ ಮತ ನೀಡಿ ಅವರಿಗೆ ಪಾಠ ಕಲಿಸಿ ಎಂದರು.
ನನಗೆ ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದರೆ ಮಾದರಿ ಆಡಳಿತ ನಡೆಸಿ ಕರ್ನಾಟಕವನ್ನು ಗುಜರಾತ್‌ಗಿಂತ ಮೇಲಿನ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ಆದರೆ ನನಗೆ ಅವಕಾಶ ಕೊಡಲಿಲ್ಲ ಎಂದರು.
ಎಲ್ಲರಿಗೂ ಆದ್ಯತೆ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ ಎಂದು ನಾನು ಭಾಷಣಗಳಲ್ಲಿ ಮಾತ್ರ ಹೇಳಲಿಲ್ಲ. ನಾವು ಶಿವಮೊಗ್ಗ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಗಳಿಗೆ ಟಿಕೆಟ್ ಹಂಚಿರುವುದೇ ಅದಕ್ಕೆ ಸಾಕ್ಷಿ ಎಂದ ಯಡಿಯೂರಪ್ಪ, 35 ವಾರ್ಡ್‌ಗಳಲ್ಲಿ 25 ಅಭ್ಯರ್ಥಿಗಳು ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಾಗಿದ್ದಾರೆ. 13 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಏಳು ಜನ ಮಹಿಳೆಯರು ಎಂದರು.
ಮತ್ತೆ “·æ¬Væ ಚೂರಿ ಹಾಕಿದವರಿಗೆ... ಡೈಲಾಗ್ ಹೇಳಿದಾಗ ಚಪ್ಪಾಳೆ ಬಿದ್ದವು. ಇವರಿಗೂ ಮುನ್ನ ಪ್ರಸ್ತಾವಿಕ ಭಾಷಣ ಮಾಡಿದ ಮಾಜಿ ಸಚಿವ ಕೆ.ಎಸ್. ಶ್ರೀನಿವಾಸ್, ಬೇರೆ ಎಲ್ಲೂ ಬೇಳೆ ಬೇಯುವುದಿಲ್ಲ ಎಂದು ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಲಿಲ್ಲ.
ರಾಜ್ಯಕ್ಕೊಂದು ಪ್ರಬಲ ಪ್ರಾದೇಶಿಕ ಪಕ್ಷ ಬೇಕು. ಕೇಂದ್ರ ಸರ್ಕಾರ ನಮ್ಮ ಮಾತು ಕೇಳುವಂತಾಗಲು ಪ್ರಾದೇಶಿಕ ಪಕ್ಷ ಪ್ರಬಲವಾಗಬೇಕು ಎಂದು ಸ್ಥಾಪಿಸಿದರು ಎಂದು ಹೇಳಿದರು.
ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ಮಖಂಡರಾದ ಅನಂತರಾಮಯ್ಯ, ರುದ್ರೇಗೌಡ, ಜಿ. ಬಸವಣ್ಯಪ್ಪ, ತಸ್ವೀರ್, ರಾಜಶೇಖರ್, ಹಾಲೇಶಪ್ಪ, ವೀರಭದ್ರಪ್ಪ ಪೂಜಾರ್, ಜಯಪ್ಪ, ಗಾಯತ್ರಿ, ಮಾಲತಿ ಸೇರಿದಂತೆ ಹಲವು ಮುಖಂಡರು ಇದ್ದರು.
ಶಿವಮೊಗ್ಗ ನಗರಸಭೆಯ 31 ವಾರ್ಡ್‌ಗಳ ಕೆಜೆಪಿ ಅಭ್ಯರ್ಥಿಗಳೂ ಸಹ ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ್ದರು.