ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿಎಂ ಆಗಬೇಕೆಂದು ಆಸೆ ಪಡುವುದರಲ್ಲಿ ತಪ್ಪೇನಿದೆ?

Rashmi Kasaragodu
Updated On : 26 Feb 2013, 11:18 am

ಶಿರಾಳಕೊಪ್ಪ: 86 ವರ್ಷದ ಆಡ್ವಾನಿ ಅವರು ಪ್ರಧಾನಮಂತ್ರಿ ಆಗಬೇಕೆಂದು ಆಸೆ ಪಡುತ್ತಿರುವಾಗ 71ವರ್ಷದ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವದರಲ್ಲಿ ತಪ್ಪೇನಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜಿಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನಿಸಿದರು.
 ಪಟ್ಟಣದಲ್ಲಿ ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಕೇವಲ 110 ಶಾಸಕರು ಆರಿಸಿ ಬಂದಾಗ ಇತರ ನಾಲ್ಕು ಸದಸ್ಯರನ್ನು ಕರೆತಂದು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಪದ್ಮನಾಭಭಟ್ಟನಂತಹ ಕಾರ್ಯಕರ್ತರಿಗೆ ಗೂಟದ ಕಾರಿನಲ್ಲಿ ಓಡಾಡಲು ಅವಕಾಶಮಾಡಿಕೊಟ್ಟ ತಪ್ಪಿಗೆ ಇಂದು ಅವರು ನಮ್ಮ ಪಕ್ಷದ ಹಾಗೂ ನನ್ನ ವಿರುದ್ಧ ಅಭ್ಯರ್ಥಿಗಳನ್ನು ಹಾಕುತ್ತಾ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಅಂತಹವರನ್ನು ನಾನು ಎಂದೂ ನಂಬುವದಿಲ್ಲ ಎಂದು ಕಿಡಿಕಾರಿದರು.
  ನಂಜುಂಡಪ್ಪ ವರದಿಯಲ್ಲಿ ಶಿಕಾರಿಪುರ ತಾಲೂಕು ಹಿಂದುಳಿದ ಪ್ರದೇಶ ಎಂಬ ಪಟ್ಟಿಯಲ್ಲಿತ್ತು, ಆದರೆ ತಮ್ಮಲ್ಲೆರ ಆಶೀರ್ವಾದದಿಂದ ಶಿಕಾರಿಪುರ ಮತ್ತು ಶಿರಾಳಕೊಪ್ಪವನ್ನು ಸಾಕಷ್ಟು ಅಭಿವೃದ್ಧಿ ಮಾಡಿರುವ ತೃಪ್ತಿ ಇದೆ ಎಂದರು.  
  ಬಿಜೆಪಿಯಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದಿಲ್ಲ, ಬದಲಾಗಿ ಯಡಿಯೂರಪರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು ಎಂದು ಮಾಜಿ ಶಾಸಕ ಕೆ.ಎಚ್. ಶ್ರೀನಿವಾಸ  ಹೇಳಿದರು.
 ಕೆಜಿಪಿ ರಾಜ್ಯ ಉಪಾಧ್ಯಕ್ಷ ಕೆ.ಎಚ್. ಶ್ರೀನಿವಾಸ, ಮಾಜಿ ಸಚಿವ ಬಸವಣ್ಣೆಪ್ಪ, ವೀರಭದ್ರ ಪೂಜಾರಿ, ಅಗಡಿ ಅಶೋಕ, ಡಾ. ಮುರಘರಾಜ್, ಡಾ. ಶಿವಕುಮಾರ್, ಹನುಮಂತಪ್ಪ, ರೇವಣಪ್ಪ, ಜಿಪಂ ಸದಸ್ಯ ಬಂಗಾರನಾಯ್ಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement