ಅಕ್ರಮ ಮಾಂಸ ಸಾಗಾಟ: ಬಂಧನ
ಸಾಗರ: ಪಟ್ಟಣದ ದುರ್ಗಾಂಬ ವೃತ್ತದ ರೇಲ್ವೇ ಹಳಿ ಸಮೀಪ ಗೋವಿನ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಸೊರಬ ರಸ್ತೆಯ ರೇಲ್ವೇ ಗೇಟ್ ಸಮೀಪ ಶಿರಾಳಕೊಪ್ಪದಿಂದ ಹೀರೋಹೊಂಡ ಬೈಕಿನಲ್ಲಿ ಅಕ್ರಮವಾಗಿ ಸುಮಾರು 40 ಕೆ.ಜಿ. ದನದ ಮಾಂಸವನ್ನು ಮಾರಾಟಕ್ಕೆ ತರುತ್ತಿದ್ದ ಜಹೀರುದ್ದೀನ್ ಶಿರಾಳಕೊಪ್ಪ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಭಜರಂಗದಳದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ.
ಬೈಕಿನಲ್ಲಿ ಎರಡು ಗೋಣಿಚೀಲದಲ್ಲಿ ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.
ವಿಚಾರಿಸಿದಾಗ ಆತ ದನದ ಮಾಂಸವನ್ನು ಸಾಗರದ ಯೂಸೂಫ್ ಎಂಬಾತನಿಗೆ ಮಾರಾಟ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.