ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಉಪದೇಶ ನಿರಂತರವಿದ್ದಾಗ ಫಲ ಪಡೆಯಲು ಸಾಧ್ಯ'

Lingaraj Badiger
Updated On : 28 Feb 2013, 11:03 am

ಸೊರಬ: ಉಪದೇಶ ನಿರಂತರವಿದ್ದಾಗ ಮಾತ್ರ ಅದರ ಫಲ ಪಡೆಯಲು ಸಾಧ್ಯ. ಆದರೆ ಇಂದು ನಿಮಿಷವೂ ಪುರುಸೊತ್ತಿಲ್ಲ ಎನ್ನುವವರಿಗೆ, ಒಂದೇ ಮಾತಿನಲ್ಲಿ ಉಪದೇಶ ಮಾಡಬೇಕೆಂದರೆ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಎಂದಷ್ಟೇ ಹೇಳಬಹುದು. ಗುರು ಇರುವುದೇ ಉಪದೇಶ ನೀಡುವುದಕ್ಕೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದರು.
 ತಾಲೂಕು ಕೋಣನಕಟ್ಟೆಯ ಮಹಾಗಣಪತಿ ದೇವಸ್ಥಾನದಲ್ಲಿ ಬುಧವಾರ ನಡೆದ ಗಣಹೋಮ ಮತ್ತು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಪರಿಪೂರ್ಣತೆ ಇರಲಿ: ಪರಿಪೂರ್ಣತೆ ಇಲ್ಲದಿರುವುದು ಭಕ್ತಿಯಾಗುವುದಿಲ್ಲ, ಅಂತಹ ಅಪರಿಪೂರ್ಣ ಕಾರ್ಯಗಳಿಂದ ಯಾವ ಫಲವೂ ದೊರಕುವುದಿಲ್ಲ. ಮನೆ ಕಟ್ಟುವುದಕ್ಕಿಂತಲೂ ಮನಸ್ಸು ಕಟ್ಟುವ, ಬೆಸೆಯುವ ಕೆಲಸ ಹೆಚ್ಚು ಆತ್ಮ ತೃಪ್ತಿ ಕೊಡುತ್ತದೆ. ಹಾಗಾಗಿ ಒಳ್ಳೆಯ ಕೆಲಸಗಳಿಗೆ ಎಂದಿಗೂ ಮೌಲ್ಯವಿದ್ದೇ ಇರುತ್ತದೆ ಎಂದರು.
 ನಮ್ಮ ಪೂರ್ವಿಜರ ತ್ಯಾಗ, ಶ್ರದ್ಧೆ, ಉತ್ತಮ ಭವಿತವ್ಯದ ಉದಾತ್ತ ಸಾಕಾರವೇ ಈ ದೇಗುಲ, ಇಂತಹ ದೇಗುಲಗಳು ಮಾನವರನ್ನು ಹತ್ತಿರ ತರುವ ಸೇತುವೆಯಾಗಿರುತ್ತವೆ ಎಂದರು.
 ಇಲ್ಲಿನ ಲಕ್ಷ್ಮೀ ನಾರಾಯಣ ಸ್ವಾಮಿಯವರ ಮನೆಯಲ್ಲಿ ಪಾದಪೂಜೆ ಏರ್ಪಡಿಸಲಾಗಿತ್ತು.
ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು, ಮಾಜಿ ಶಾಸಕ ಎಚ್. ಹಾಲಪ್ಪ ಹಾಗೂ ಕೆಜೆಪಿ ಮುಖಂಡರು, ಕ್ಯಾಸನೂರು ಸೀಮೆ ಭಕ್ತರು, ಗ್ರಾಮಸ್ಥರೂ ಸೇರಿದಂತೆ ತಾಲೂಕಿನ ಹಲವು ವಿಪ್ರರು, ಗಣ್ಯರು ಗುರುಪಾದುಕ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement