ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೊಳೆತ, ಅಪರಿಚಿತ ಶವ ಪತ್ತೆ

Lingaraj Badiger
Updated On : 28 Feb 2013, 11:04 am

ಭದ್ರಾವತಿ: ಪಟ್ಟಣದ ಹಳೇನಗರದಲ್ಲಿ ಶಂಕರ್ ಚಿತ್ರಮಂದಿರದ ಹಿಂಭಾಗ ಭದ್ರಾನದಿ ದಂಡೆಯಲ್ಲಿ ಬುಧವಾರ ಸಂಜೆ ಅಪರಿಚಿತ ಶವವೊಂದು ಪತ್ತೆಯಾಗಿದೆ.    ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಹಳೇನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್,  ಎ.ಎಸ್.ಐ ದೇವೇಗೌಡ ಮತ್ತು ಸಿಬ್ಬಂದಿ ಶವ ತೇಲುತ್ತಿದ್ದ ಸ್ಥಳಕ್ಕೆ ಧಾವಿಸಿ ಅದನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು ಎರಡೂ ಕಾಲುಗಳು ಇಲ್ಲವಾಗಿವೆ.
 ದೇಹದ ಬಹುಭಾಗವನ್ನು ಜಲಚರಗಳು ತಿಂದುಹಾಕಿದ್ದು, ಶವದ ಗುರುತು ಹಚ್ಚುವುದು ಸಹ ಕಷ್ಟವಾಗುವ ಪರಿಸ್ಥಿತಿಯಲ್ಲಿತ್ತು.   ಪೋಲಿಸರು ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಮೃತ ವ್ಯಕ್ತಿಗೆ ಸುಮಾರು 30ರಿಂದ 35 ವರ್ಷ ವಯಸ್ಸಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement