ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ರಾಷ್ಟ್ರಮಟ್ಟದ ಸಮ್ಮೇಳನ

Lingaraj Badiger
Updated On : 28 Feb 2013, 11:03 am

ಶಿವಮೊಗ್ಗ: ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾರ್ಚ್ 1 ಮತ್ತು 2ರಂದು ಎಂಜಿನಿಯರಿಂಗ್ ಹಾಗೂ ನಿರ್ವಹಣಾ ಶಾಸ್ತ್ರದಲ್ಲಿನ ಇತ್ತೀಚಿನ ವಿದ್ಯಮಾನಗಳು ಎಂಬ ವಿಷಯ ಕುರಿತಂತೆ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ.
  ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಪ್ರಾಂಶುಪಾಲ ಡಾ. ಸುರೇಶ್ ಚಂದ್ರಮೋಹನ್, ಎಂಜಿನಿಯರಿಂಗ್ ಹಾಗೂ ನಿರ್ವಹಣಾ ಶಾಸ್ತ್ರದಲ್ಲಿನ ಪ್ರಸಕ್ತ ಬೆಳವಣಿಗೆಗಳ ಕುರಿತಂತೆ, ವಿಷಯ ತಜ್ಞರು, ಕೈಗಾರಿಕೋದ್ಯಮಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲು ಸಮ್ಮೇಳನದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ 18 ತಾಂತ್ರಿಕ ಗೋಷ್ಠಿಗಳು, 139 ಪ್ರಬಂಧಗಳು, 6 ಪ್ರಮುಖ ಥೀಮ್‌ಗಳಾದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಬೇಸಿಕ್ ಸೈನ್ಸ್‌ಮತ್ತು ಬಿಜೆನೆಸ್ ಅಡ್ಮಿನಿಸ್ಟ್ರೇಷನ್‌ಗಳ ಅಡಿಯಲ್ಲಿ ಪ್ರಂಬಂಧಗಳು ಮಂಡನೆಯಾಗಲಿವೆ ಎಂದರು.
  ಮುಖ್ಯ ಅತಿಥಿಗಳಾಗಿ ಡಾ.ಎಂ. ಎಚ್. ಕೋರಿ ಹಾಗೂ ದಾವಣಗೆರೆ ವಿವಿ ಕುಲ ಸಚಿವ  (ಪರೀಕ್ಷಾಂಗ ವಿಭಾಗ) ಡಾ. ಬಿ. ಬಕ್ಕಪ್ಪ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
  ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಮಾತನಾಡಿ, ಮಾರ್ಚ್ 1 ರಂದು ಬೆಳಿಗ್ಗೆ 9ಗಂಟೆಗೆ ಕಾರ್ಯಕ್ರಮಕ್ಕೆ ಕೋಲ್ಕತ್ತಾದ ಭಾರತೀಯ ಸಾಂಖ್ಯಿಕ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಪ್ರೊ. ಬಿ. ಕಲ್ಯಾಣ್ ಬಿ. ಸಿನ್ಹಾ, ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಡೀನ್ ವಿಕ್ರಮ್ ಸಾರಾಭಾಯಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಎಸ್.ಎ. ಬಾರಿ, ಸಂಸ್ಥೆಯ ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
   ಮಾ.2ರಂದು ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಡಾ. ಬಿ. ಬಕ್ಕಪ್ಪ, ಗುಲ್ಬರ್ಗ ವಿವಿ ಅಪ್ಲೈಡ್ ಎಲೆಕ್ಟ್ರಾನಿಕ್ ವಿಭಾಗದ ನಿಕಟಪೂರ್ವ ಅಧ್ಯಕ್ಷ ಪ್ರೊ. ಪಿ.ವಿ. ಹುನಗುಂದ ಪಾಲ್ಗೊಳ್ಳುವರು. ಸಂಸ್ಥೆಯ ಸದಸ್ಯೆ ಎಸ್.ವೈ. ಉಮಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
   ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಡಾ. ರವಿ ಎಂ. ಯಡಹಳ್ಳಿ, ಪ್ರೊ. ಆರ್. ನಾಗರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement