'ಪ್ರಾಚೀನ ಕಲೆ ಉಳಿಸುವುದು ಕರ್ತವ್ಯ'
ಶಿವಮೊಗ್ಗ: ದೇಶದ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಟನಂ ಬಾಲ ನಾಟ್ಯ ಕೇಂದ್ರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಅಂತರ ರಾಜ್ಯ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದ ಪ್ರಾಚೀನ ಕಲೆಗಳು ಅವನತಿಯತ್ತ ಸಾಗುತ್ತಿದ್ದು ಅವುಗಳನ್ನು ಸಂರಕ್ಷಣೆ ಮಾಡುವ ಹೊಣೆ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಆಂಧ್ರದ ವಿಶಾಖ ಪಟ್ಟಣ, ಗೋವಾ, ಒರಿಸ್ಸಾ ಹಾಗೂ ತಮಿಳುನಾಡು ಹಾಗೂ ಜಿಲ್ಲೆಯ ಕಲಾವಿದರು ಉತ್ತಮ ನೃತ್ಯ ಪ್ರದರ್ಶನ ನೀಡಿದರು.
ಹಿರಿಯ ಕಲಾವಿದೆ ಶುಭ ಧನಂಜಯ ಹಾಗೂ ಶಂಕರ್, ಕೇಶವಕುಮಾರ್, ಲತಾರಾಭಟ್, ಇನ್ನರ್ವ್ಹೀಲ್ ಕಾರ್ಯದರ್ಶಿ ಬಿಂದುವಿಜಯಕುಮಾರ್ ಮತ್ತಿತರರು ಇದ್ದರು.