ಪ್ರವಾಸಿಗರ ಆಕರ್ಷಣೆಗೆ ಸಂಗೀತ ಕಾರಂಜಿ ಸಿದ್ಧ
ಜೋಗ್‌ಫಾಲ್ಸ್: ಜಗದ್ವಿಖ್ಯಾತ ಜೋಗ ಜಲಪಾತದ ಸಮೀಪ ಆರಂಭಗೊಂಡಿದ್ದ ಸಂಗೀತ ಕಾರಂಜಿ ಮತ್ತು ಲೇಸರ್ ಪ್ರದರ್ಶನ 2 ತಿಂಗಳ ಬಳಿಕ ಮತ್ತೆ ಆರಂಭಗೊಂಡಿದ್ದು, ನೀರಿಲ್ಲದ ಜಲಪಾತದ ದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತೆ ಮನರಂಜನೆ ಒದಗಿಸಲು ಸಿದ್ಧವಾಗಿದೆ.
ಕಳೆದ 2 ತಿಂಗಳ ಹಿಂದೆ ಲೇಸರ್ ಪ್ರದರ್ಶನದ ಪ್ರೊಜೆಕ್ಟರ್ ಸುಟ್ಟು ಹೋಗಿತ್ತು. ಕೆಲವು ದಿನಗಳ ಕಾಲ ಪ್ರನಾಸಿಗರಿಗೆ ಸಂಗೀತ ಕಾರಂಜಿ ಮಾತ್ರ ಲಭ್ಯವಿತ್ತ. ಆದರೆ ಕಳೆದ ತಿಂಗಳಲ್ಲಿ ಸಂಗೀತ ಕಾರಂಜಿಯ ಮೋಟರ್ ಪಂಪ್ ಕೂಡ ಸುಟ್ಟು ಹೋಗಿದ್ದರಿಂದ ಕಳೆದ 20 ದಿನಗಳಿಂದ ಸಂಗೀತ ಕಾರಂಜಿ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.