ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳ್ಳತನವಾಗಿದ್ದ ಆಟೋ ಬೆಂಗಳೂರಿನಲ್ಲಿ ಪತ್ತೆ

Lingaraj Badiger
Updated On : 23 Jan 2013, 11:08 am

ಭದ್ರಾವತಿ: 25.12.2012ರಂದು ಪಟ್ಟಣದ ಲೋಟಸ್ ರೆಸ್ಟೋರೆಂಟ್ ಮುಂಭಾಗದಲ್ಲಿ ನಿಲ್ಲಿಸಿ ಊಟ ಮಾಡಿಕೊಂಡು ಹೊರಬಂದು ನೋಡುವಷ್ಟರಲ್ಲಿ ಕಳ್ಳತನವಾಗಿದ್ದ
ಕೆ.ಎ.18-ಎ-1184 ನಂಬರಿನ ಆಟೋರಿಕ್ಷಾ ಕಳುವಾಗಿತ್ತು. ಅದು ಬೆಂಗಳೂರಿನ ಹನುಮಂತನಗರ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಆಟೋರಿಕ್ಷಾ ನಂಬರನ್ನು ಬದಲಾಯಿಸಿ ಓಡಿಸುತ್ತಿದ್ದು, ಬೆಂಗಳೂರು ಪೊಲೀಸರು ಚಾರ್ಸಿ ನಂಬರ್ ಪರೀಕ್ಷಿಸಲಾಗಿ ಅದು ಭದ್ರಾವತಿಯಲ್ಲಿ ಕಳ್ಳತನವಾಗಿದ್ದ ಆಟೋರಿಕ್ಷಾ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಅದರ ನಂಬರನ್ನು ಕೆಎ 04-ಬಿ 463 ಎಂದು ಬದಲಾಯಿಸಿ ಓಡಿಸುತ್ತಿದ್ದುದು ಬೆಳಕಿಗೆ ಬಂದಿದೆ. ನ್ಯಾಯಾಲಯದ ಆದೇಶದಂತೆ ಪಟ್ಟಣದ ನ್ಯೂಟೌನ್ ಸಬ್ ಇನ್ಸ್‌ಪೆಕ್ಟರ್ ವೈ. ತಿಮ್ಮಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟ್ಯಾಕ್ಟರ್‌ನಿಂದ ಬಿದ್ದು ಯುವಕ ಸಾವು
ಸಾಗರ: ತಾಲೂಕಿನ ಆನಂದಪುರಂ ಸಮೀಪದ ಗೌತಮಪುರದ ಬಳಿ ಟ್ಯಾಕ್ಟರ್‌ನಿಂದ ಬಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟ ಯುವಕನನ್ನು ಅಭಿ (18) ಎನ್ನಲಾಗಿದೆ.
ತ್ಯಾಗರ್ತಿಯಿಂದ ಆನಂದಪುರಂ ರೈಸ್ ಮಿಲ್ಲಿಗೆ ಬತ್ತವನ್ನು ಇಳಿಸಿ, ವಾಪಸ್ ಹೋಗುತ್ತಿರುವ ಸಂದರ್ಭದಲ್ಲಿ ಗೌತಮಪುರದ ಬಳಿ ಈ ಅಪಘಾತ ಸಂಭವಿಸಿದೆ. ಅಭಿ ಎಂಬಾತ ಚಾಲಕನ ಪಕ್ಕದಲ್ಲಿ ಕುಳಿತಿದ್ದಾಗ, ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಬದಿಗೆ ಎಳೆದುಕೊಂಡು ಹೋಗಿದೆ.
ಈ ಸಂದರ್ಭದಲ್ಲಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಅಭಿ ಕೆಳಗೆ ಬಿದ್ದಿದ್ದು, ಆತನ ತಲೆಯ ಮೇಲೆ ಟ್ಯಾಕ್ಟರ್ ಹತ್ತಿದೆ ಎನ್ನಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement