ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿದ್ಧರಾಮೇಶ್ವರ ಜಯಂತಿ

Lingaraj Badiger
Updated On : 23 Jan 2013, 11:11 am

ಶಿವಮೊಗ್ಗ: ಫೆಬ್ರವರಿ 16ರಂದು ಶ್ರೀ ಗುರುಸಿದ್ಧರಾಮೇಶ್ವರರ 840ನೇ ಜಯಂತಿಯನ್ನು ಹಾಗೂ ಜಿಲ್ಲಾ ಬೋವಿ ಜನಾಂಗದ ಸಮಾವೇಶವನ್ನು ಹಮ್ಮಿಕೊಳ್ಳಲು ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ ನಿರ್ಧರಿಸಿದೆ. ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಶಿವರುದ್ರಯ್ಯ ಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ.
ಡಾ. ಶರಣಪ್ಪಗೆ ಬೀಳ್ಕೊಡುಗೆ
ಸಾಗರ: ಗದಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಇಲ್ಲಿನ ಎಎಸ್‌ಪಿ ಡಾ. ಎಸ್.ಡಿ. ಶರಣಪ್ಪ ಅವರನ್ನು ಉಪವಿಭಾಗ ವತಿಯಿಂದ  ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶರಣಪ್ಪ, ಸಾಗರದಲ್ಲಿ ಕರ್ತವ್ಯ ನಿರ್ವಹಿಸಿರುವುದು ನನಗೆ ಉತ್ತಮ ಅನುಭವ ನೀಡಿದೆ. ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ನನ್ನೊಂದಿಗೆ ಕಾಲಕಾಲಕ್ಕೆ ಪ್ರಸ್ತುತ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸುತ್ತಿದ್ದರಿಂದ ಯಾವುದೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶವಾಗಲಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೂಕ್ತ ಸಲಹೆ ನೀಡಿದಾಗ ಮೇಲಾಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಡಾ. ಎಸ್.ಡಿ. ಶರಣಪ್ಪ ಅವರ ಕುರಿತು ಶಿಕಾರಿಪುರ ನಗರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮಾದಪ್ಪ, ಸಾಗರ ಠಾಣೆಯ ಪಿಎಸ್‌ಐ ತೀರ್ಥಪ್ಪ, ರಾಜಾಚಾರಿ, ಸಿಬ್ಬಂದಿಗಳಾದ ಗುಡ್ಡಯ್ಯ, ಪುಟ್ಟಪ್ಪ ಇನ್ನಿತರರು ಮಾತನಾಡಿದರು. ಯಾಳನಿ ಶರಣಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement