ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಬೇಡ್ಕರ್ ಶೋಷಿತ ವರ್ಗಗಳ ಆಶಾಕಿರಣ

Lingaraj Badiger
Updated On : 24 Jan 2013, 10:53 am

ತೀರ್ಥಹಳ್ಳಿ: ಡಾ. ಅಂಬೇಡ್ಕರ್ ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಅವರ ವಿಚಾರಧಾರೆಗಳನ್ನು ಇನ್ನೂ  ಜನಮನಗಳಿಗೆ ತಲುಪುವಂತೆ ಪ್ರಚುರಪಡಿಸಬೇಕಾದ ಅಗತ್ಯವಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ಬಂಟರ ಭವನದಲ್ಲಿ ಅಂಬೇಡ್ಕರ್ ವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತ ಶಕ್ತಿ  ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ವರ್ಗದ ವಾಸ್ತವ ಸ್ಥಿತಿಯ ಸತ್ಯ ಅರಿಯಬೇಕಾದರೆ ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ವಿಚಾರಧಾರೆಗಳ ಕುರಿತಂತೆ ಮುಂದುವರಿದ ಜನಾಂಗವೂ ಸೇರಿದಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.     
ಗುಲಾಮಗಿರಿ ಬದುಕು: ಪ್ರೊ. ರಾಚಪ್ಪ ಸಮಾರಂಭ ಉದ್ಘಾಟಿಸಿ, ಅಂಬೇಡ್ಕರ್ ಜನಿಸದಿದ್ದರೆ ಜೀತದ ಎತ್ತುಗಳಂತೆ ದುಡಿಯುತ್ತಿದ್ದ ದಲಿತವರ್ಗ ಗುಲಾಮಗಿರಿಯಲ್ಲೇ ಬದುಕಬೇಕಾಗಿತ್ತು. ಅಂಬೇಡ್ಕರ್ ಅವರಿಂದಾಗಿಯೇ ಈ ವರ್ಗದ ಹೊಸಬಾಳು ಆರಂಭವಾಯಿತು ಎಂದರು.     
ಪ್ರೊ.ಕೆ. ಗಂಗಾಧರ್ ಮಾತನಾಡಿ, ಮೀಸಲಾತಿಯ ನಡುವೆಯೂ ಈ ವರ್ಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಈಗ ಸ್ಪರ್ಧೆ ಏರ್ಪಟ್ಟಿದೆ. ಮನುಷ್ಯ ಮನುಷ್ಯನ ನಡುವಿನ ಅಂತರ ಕಡಿಮೆಯಾಗಬೇಕು. ಇಲ್ಲದಿದ್ದರೆ ಒಂದಾಗುವುದು ಅಸಾಧ್ಯ ಎಂದು ಹೇಳಿದರು.   
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ. ರಮೇಶ  ಶೆಟ್ಟಿ, ಶಿವಾನಂದಕರ್ಕಿ, ಕಬಸೆ ಅಶೋಕಮೂರ್ತಿ, ದೇವೇಂದ್ರಪ್ಪ, ಮಂಜುನಾಥ ನವುಲೆ,  ಪರಮೇಶ್ವರ್ ದೂಗೂರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement