ಕೆಎಸ್‌ಆರ್‌ಟಿಸಿ ಬಸ್- ಬೈಕ್ ನಡುವೆ ಡಿಕ್ಕಿ: ವ್ಯಕ್ತಿ ಸಾವು
ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಚೇನಹಳ್ಳಿ ಬಳಿ ನಡೆದಿದೆ.
ಭದ್ರಾವತಿ ಉಜ್ಜಿನಿಪುರದ ಮೋಹನ ಮೃತಪಟ್ಟಿದ್ದು, ಎಚ್.ಜಿ. ಪಲಣಿ ಮ್ತತು ಮೋಹನ್ ಎಂಬವರು ಉಜ್ಜಿನಿಪುರದಿಂದ ಬೈಕ್‌ನಲ್ಲಿ ಬರುತ್ತಿರುವಾಗ ಶಿವಮೊಗ್ಗದ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಗಾಯಗೊಂಡ ಮೋಹನ್‌ನ್ನು ಆಸ್ಪತ್ರೆಗೆ ದಾಖಲು ಮಾಡುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
ನಗದು ಅಪಹರಣ
ಶಿವಮೊಗ್ಗ: ಮನೆಯ ಮುಂಬಾಗಿಲಿನ ಬೀಗ ಮುರಿದು ಬೀರುವಿನಲ್ಲಿದ್ದ ಸಾವಿರಾರು ರುಪಾಯಿ ಅಪಹರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ. ಸದಾಶಿವಪ್ಪ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಬೀರುವಿನಲ್ಲಿದ 20 ಸಾವಿರ ರುಪಾಯಿ ಅಪಹರಿಸಲಾಗಿದೆ. ಪ್ರಕರಣ ದಾಖಲಾಗಿದೆ.