ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೌದ್ಧಿಕ ವಿಕಾಸಕ್ಕೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯ

Lingaraj Badiger
Updated On : 28 Jan 2013, 11:15 am

ಸೊರಬ: ವ್ಯಕ್ತಿಯ ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳು ಪೂರಕ, ಹಾಗಾಗಿ ಅಂತಹ ಚಟುವಟಿಕೆಗಳನ್ನು ಬೆಳೆಯುವ ಹಂತದಲ್ಲಿಯೇ ಬೆಳೆಸಿಕೊಳ್ಳುವುದು ಸೂಕ್ತ ಎಂದು ಬಾಲ ನಟಿ ಅನುಜ್ಞಾ ಪಿ. ರಾವ್ ಅಭಿಪ್ರಾಯಪಟ್ಟರು.
ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅವ್ಯಕ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಸಮ್ಮೇಳನಗಳು ಅಗತ್ಯವಾಗಿದೆ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕೂಡ ಸಹಕರಿಸಿದಂತಾಗುತ್ತದೆ, ಪ್ರತಿ ವರ್ಷವೂ ಇಂತಹ ಸಮ್ಮೇಳನ ನಡೆಯಬೇಕು ಎಂದು ಆಶಿಸಿದರು.
ತಾಲೂಕು ನಿಸರಾಣಿಯಲ್ಲಿ ಗ್ರಾಮದ ವಿದ್ಯಾವರ್ಧಕ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸಮ್ಮೇಳನಕ್ಕೆ ಸಂಘದ ಶ್ರೀಪಾದರಾವ್ ಚಾಲನೆ ನೀಡಿದರು.
ತಾಕಸಾಪ ಅಧ್ಯಕ್ಷ ಕೃಷ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಸಾಹಿತಿ ರಾಜಶೇಖರ್ ಪಾಟೀಲ್, ಸಮಾರೋಪ ಭಾಷಣ ಮಾಡಿದರು.
ಸಾಗರದ ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ, ತಾಲೂಕು ಪೂರ್ವಾಧ್ಯಕ್ಷರಾದ ಸೀತಾರಾಮ್ ರಾವ್, ಮಧುರಾಯಶೇಠ್, ಶಿವಾನಂದ್, ಕುಮಾರಸ್ವಾಮಿ, ಉಮೇಶ್ ಬಚ್ಚುಗತ್ತಿ, ಹಾಲೇಶ್ ನವುಲೆ, ಸಂಘದ ಕಾರ್ಯದರ್ಶಿ ರಾಘವೇಂದ್ರ, ಮಂಗಳಮೂರ್ತಿ, ದಿನಕರ ಭಟ್ ಭಾವೆ, ರಾಘವೇಂದ್ರ ಬಾಪಟ್, ಶಿವಾನಂದ ಪಾಣಿ, ಪಾಣಿ ರಾಜಪ್ಪ, ದೀಪಕ್, ಜಾವೂರು, ಆಶಾ ರಂಗನಾಥ್, ಶಿಕ್ಷಕರು, ಮಕ್ಕಳು ಇದ್ದರು.
ಸಮ್ಮೇಳನದಲ್ಲಿ ಅನುಜ್ಞಾ ಪಿ.ರಾವ್, ಶ್ರೀಪಾದರಾವ್, ಪ್ರಿಯಾಂಕ ಮಧ್ಯಾಹ್ನದವರ್‌ರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement