ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ಕಠಣ ಕಾನೂನು ಅಗತ್ಯ

Lingaraj Badiger
Updated On : 28 Jan 2013, 11:15 am

ಶಿವಮೊಗ್ಗ: ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು, ನೂತನ ಕಾನೂನು ರಚನೆಯಾಗಬೇಕು ಎಂದು ಸಾಗರ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷೆ ಶ್ರಾಲ್ಯ ಸಾಗರ ಆಗ್ರಹಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ನಗರದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಐದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೌರ್ಜನ್ಯ ಮಾಡಿದವರು ಜೀವನ ಪರ್ಯಂತ ಜೈಲಿನಲ್ಲಿ ಕಳೆಯುವಂತಾಗಬೇಕು, ಈ ನಿಟ್ಟಿನಲ್ಲಿ ಸೂಕ್ತ ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೌರ್ಜನ್ಯಗಳು ಕಡಿಮೆ ಆಗಿಲ್ಲ: ಮಹಿಳೆ ಇಂದು ಸಬಲಳಾಗಿದ್ದಾಳೆ. ಆದರೂ ಆಕೆಯ ಮೇಲೆನ ದೌರ್ಜನ್ಯಗಳು ಕಡಿಮೆ ಆಗಿಲ್ಲ. ಇದ್ದರಿಂದ ಭಾರತ ವಿಶ್ವದ ಎದುರು ಭಾರತ ತಲೆ ತಗ್ಗಿಸುವಂತಾಗಿದೆ ಎಂದ ಅವರು, ಇಂದು ಮಕ್ಕಳ ಮೇಲಿನ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಮಕ್ಕಳು ತಮ್ಮ ಬಾಲ್ಯದ ಜೀವನವನ್ನು ಅನುಭವಿಸಲು ಬಿಡುವಂತೆ ಮನವಿ ಮಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ನವೋದಯ ಶಾಲೆ ವಿದ್ಯಾರ್ಥಿ ಎಸ್. ಹೇಮಂತ್ ಕುಮಾರ್ ಮಾತನಾಡಿ, ಮಕ್ಕಳು ಸಮಾಜದಲ್ಲಿ ಒಳ್ಳೆಯದು ಕೆಟ್ಟದು ಯಾವುದೆಂದು ಗುರುತಿಸುವ ಸಾಮರ್ಥ್ಯ ಹೊಂದಿರಬೇಕು. ನಮ್ಮ ಭಾವನೆ ಹಾಗೂ ಮನಸು ಅರಳುವಂತಹ ವಾತಾವರಣವಿರಬೇಕು. ಮಕ್ಕಳಲ್ಲಿನ ಸಾಹಿತ್ಯವನ್ನು ಪ್ರೋತ್ಸಾಹಿಸಿ ಎಂದರು.
ಪ್ರತಿಯೊಂದು ಶಾಲೆಯಲ್ಲಿ ಮೂರು ವರ್ಗದ ವಿದ್ಯಾರ್ಥಿಗಳಿರುತ್ತಾರೆ. ಪ್ರಥಮ ವರ್ಗದಲ್ಲಿ ಎಂಜಿನಿಯರ್, ಡಾಕ್ಟರ್, ಎರಡನೇ ವರ್ಗದಲ್ಲಿ ಶಿಕ್ಷಕರು, ಗುಮಾಸ್ತರು. ಮೂರನೇ ವರ್ಗದಲ್ಲಿ ರಾಜಕಾರಣಕ್ಕೆ ಬಂದು ಆಡಳಿತ ಮಾಡುತ್ತಾರೆ. ಬುದ್ಧಿವಂತರು ರಾಜಕಾರಣಕ್ಕೆ ಬರುವಂತಹ ಮನಸ್ಸು ಮಾಡಬೇಕು ಅದಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಡಿ.ಎಂ. ವೆಂಕಟರಮಣ, ಕೆನರಾ ಬ್ಯಾಂಕ್‌ವ್ಯವಸ್ಥಾಪಕ ವೈ.ವಿ. ಗೋಪಾಲಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ರಿಯಾಜ್ ಪಾಷಾ, ಅನುಜ್ಞಾ.ಪಿ. ರಾವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement