ಶಿವಮೊಗ್ಗ: ನೆಹರು ಯುವ ಕೇಂದ್ರ, ಕುವೆಂಪು ಕನ್ನಡ ಸಂಘದ ಆಶ್ರಯದಲ್ಲಿ 29ರಂದು ಬೆಳಿಗ್ಗೆ11ಗಂಟೆಗೆ ಕುಂಸಿಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜೀವನ ಕೌಶಲ್ಯ ತರಬೇತಿ ಶಿಬಿರ ಏರ್ಪಡಿಸಿದೆ. ಜಿಪಂ ಸದಸ್ಯ ಪ್ರೇಮ ಸುಧಾಕರ್ ಶಿಬಿರ ಉದ್ಘಾಟಿಸುವರು. ತಾಪಂ ಸದಸ್ಯೆ ಶಾರದ ರಂಗನಾಥ್, ಗ್ರಾಪಂ ಉಪಾಧ್ಯಕ್ಷ ಎಂ. ಗುಡದಯ್ಯ, ಕುವೆಂಪು ಕನ್ನಡ ಸಂಘದ ಪಿ. ವೇದಾಂತ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎ.ಎ. ಡೋನಿ ಭಾಗವಹಿಸುವರು.