ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್‌ಎಂವಿ ಸೊಸೈಟಿಗೆ 16.91 ಲಕ್ಷ ನಿವ್ವಳ ಲಾಭ

Lingaraj Badiger
Updated On : 1 Feb 2013, 10:51 am

ಶಿವಮೊಗ್ಗ: ನಗರದ ಸರ್.ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿ 2011-12ನೇ ಸಾಲಿನಲ್ಲಿ 16.91 ಲಕ್ಷ ರುಪಾಯಿ ನಿವ್ವಳ ಲಾಭ ಗಳಿಸಿದೆ.
 ಸೊಸೈಟಿಯ 31ನೇ ಸರ್ವ ಸದಸ್ಯರ ಸಭೆಯು ಜ.27ರಂದು ನಗರದ ಬಿ.ಎಚ್.ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರಲ್ಲಿ ನಡೆಯಿತು. ಸೊಸೈಟಿ ಅಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
 30ನೇ ಸರ್ವಸದಸ್ಯರ ಮಹಾಸಭೆಯ ನಡವಳಿಕೆಗಳನ್ನು ಹಾಗೂ 2011-12ನೇ ಸಾಲಿನ ಜಮಾ-ಖರ್ಚು, ಲಾಭ-ನಷ್ಟ ಹಾಗೂ ಆಸ್ತಿ ಜವಾಬ್ದಾರಿ ತಃಖ್ತೆಗಳನ್ನು ಸಂಘದ ಉಪಾಧ್ಯಕ್ಷ ಎಸ್.ಅನಂತ ಶಾಸ್ತ್ರಿ ಮಂಡಿಸಿದರು. ಸಂಘದ ಕಾರ್ಯದರ್ಶಿ ಕೆ.ಆರ್. ಮನ್ಮಥ 2011-12ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿ, ವರ್ಷಾಂತ್ಯಕ್ಕೆ 75.12 ಲಕ್ಷ ಷೇರು ಬಂಡವಾಳ ಹೊಂದಿದೆ. ಎಲ್ಲಾ ರೀತಿಯ ಸಾಲ ಸೇರಿ 635.18 ಲಕ್ಷ ಸಾಲ ನೀಡಿದ್ದು, 477.47 ಲಕ್ಷ ಸಾಲ ವಸೂಲಾಗಿದೆ. ವರ್ಷಾಂತ್ಯಕ್ಕೆ ಸಂಘವು 982.47 ಲಕ್ಷ ರುಪಾಯಿ ವಿವಿಧ ಠೇವಣಿ ಹೊಂದಿದೆ ಎಂದು ವಿವರಿಸಿದರು.
 ಸಂಘದ ಖಜಾಂಚಿ ಎನ್.ಎಂ. ರಘುರಾಮ್, 2011-12ನೇ ಸಾಲಿನ ಹೆಚ್ಚುವರಿ ವೆಚ್ಚ ಹಾಗೂ ಸಂಘದ ಸದಸ್ಯರಿಂದ ಬಂದ ಚರ್ಚಾ ವಿಷಯ ಮಂಡಿಸಿದರು. 2012-13ನೇ ಸಾಲಿನ ಆಯ-ವ್ಯಯದ ವಿಷಯವನ್ನು ಸಂಘದ ನಿರ್ದೇಶಕ ಎಚ್. ಸುಮತೀಂದ್ರಾಚಾರ್ ಮಂಡಿಸಿದರು. ಸಂಘದ ನಿರ್ದೇಶಕ ಜಿ.ಕೆ. ಮಾಧವಮೂರ್ತಿಯವರು ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
 ಸಂಘದ ಅಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ಸಂಘ 16,91,073.90 ನಿವ್ವಳ ಲಾಭಗಳಿಸಿರುವುದನ್ನು ಪ್ರಕಟಿಸಿ, ಈ ಬಾರಿ ಶೇ.8 ಡಿವಿಡೆಂಡ್ ಘೋಷಿಸಿರುವ ವಿಷಯವನ್ನು ಸಭೆಗೆ ತಿಳಿಸಿದರು.
ಸಂಘದ ಹಿರಿಯ ಸದಸ್ಯ ಎ.ಎಚ್. ರಾಮಸ್ವಾಮಿ ಸಭೆಗೆ ಚಾಲನೆ ನೀಡಿದರು. ನಿರ್ದೇಶಕ ಎಚ್.ಕೆ. ಸತ್ಯೇಂದ್ರ, ಎಸ್.ವಿ. ರಾಘವೇಂದ್ರ, ಎಚ್.ಕೆ. ಶೇಷಪ್ಪ, ಸುಮಿತ್ರಮ್ಮ ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement