ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಬ್ಲಿಗೊಳ್ಳ ಜಲಾಶಯ ನೀರು ಪೋಲು

Lingaraj Badiger
Updated On : 2 Jul 2013, 10:43 am

ಶಿಕಾರಿಪುರ: ತಾಲೂಕಿನ ಸಾವಿರಾರು ಎಕರೆ ಜಮೀನಿಗೆ ನೀರುಣಿಸುತ್ತಿರುವ ಬೃಹತ್ ಅಂಬ್ಲಿಗೊಳ್ಳ ಜಲಾಶಯದಲ್ಲಿನ ಅಲ್ಪಸ್ವಲ್ಪ ಸಂಗ್ರಹವಾಗಿರುವ ನೀರು ಇದೀಗ ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ಗೇಟ್ ಮೂಲಕ  ಪೋಲಾಗುತ್ತಿದ್ದು ಈ ಬಗ್ಗೆ ಕಳೆದ ಕೆಲ ದಿನದ ಹಿಂದೆ ನಡೆದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಇಲಾಖೆಗಳ ಪ್ರಗತಿ ಪರಶೀಲನಾ ಸಭೆಗೆ ತಪ್ಪು ಮಾಹಿತಿ ನೀಡುವ ಮೂಲಕ ಜನಪ್ರತಿನಿಧಿಗಳ ಸಹಿತ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕವಾಡಿದ್ದಾರೆ.
 ಶಿಕಾರಿಪುರ ತಾಲೂಕಿನ ಸಮಸ್ತ ರೈತರಿಗೆ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯ ಎರಡು ಕಣ್ಣಿನಂತಿದ್ದು, ಕಳೆದ ಕೆಲ ದಿನದಿಂದ ತಾಲೂಕಿನಲ್ಲಿ ಸುರಿದ ಅಲ್ಪಸ್ವಲ್ಪ ಪ್ರಮಾಣದ ಮಳೆಗೆ ಬರಿದಾಗಿದ್ದ ಅಂಬ್ಲಿಗೊಳ್ಳ ಜಲಾಶಯದಲ್ಲಿ ನೀರಿನ ಸೆಲೆ ಕಾಣತೊಡಗಿದೆ.
ಅಧಿಕಾರಿಗಳ ಬೇಜವಾಬ್ದಾರಿ: ಈ ಬಾರಿನ ಮುಂಗಾರು ಇದುವರೆಗೂ ಹೆಚ್ಚಿನ ರಭಸ ಕಂಡಿಲ್ಲ. ಸಾಗರ ತಾಲೂಕಿಗೆ ಹೆಚ್ಚು ಹೊಂದಿಕೊಂಡಿರುವ ಅಂಬ್ಲಿಗೊಳ್ಳ ಜಲಾಶಯಕ್ಕೆ ಸಾಗರದಲ್ಲಿನ ಮಳೆ ನೀರು ಮೂಲ ನೆಲೆ. ಇಂತಹ ಬಹು ಅಮೂಲ್ಯವಾದ ಜಲಾಶಯದ ನೀರು ಇದೀಗ ಗೇಟ್‌ಗಳ ಮೂಲಕ ಅಧಿಕ ಪ್ರಮಾಣದಲ್ಲಿ ಸೋರುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆಗೆ ಸಾಕ್ಷಿಯಾಗಿದೆ.
 ಕಳೆದ ಬುಧವಾರ ಕ್ಷೇತ್ರದ ಶಾಸಕ ಯಡಿಯೂರಪ್ಪನವರ ಅಧ್ಯಕ್ಷತೆಯ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾರಿ ನೀರಾವರಿ ಇಲಾಖೆಯ ಅಧಿಕಾರಿಗಳು ಅಂಬ್ಲಿಗೊಳ್ಳ ಜಲಾಶಯದ ಗೇಟ್‌ಗಳು ಸುಸ್ಥಿತಿಯಿಂದಿದ್ದು ನೀರಿನ ಪೋಲು ಅಸಾದ್ಯ ಎಂದು ಉತ್ತರಿಸಿ ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ.
ಬಿಎಸ್‌ವೈ ಎಚ್ಚರಿಕೆಗೆ ಬೆಲೆ ಇಲ್ಲ:  ಈ ಬಗ್ಗೆ ಶಾಸಕರು ಎಂತಹ ಸಂದರ್ಭದಲ್ಲಿಯೂ ನೀರು ಪೋಲಾಗದಂತೆ ಕ್ರಮ ವಹಿಸಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗೆ ಸೂಚಿಸಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ. ನೀರು ಪೋಲಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗುವ ಬಗ್ಗೆ ಅನುಮಾನವಿದೆ. ಈಗಲೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಲ್ಲಿ ಅಳಿದುಳಿದ ನೀರು ಜಲಾಶಯದಲ್ಲಿ ಶೇಕರಿಸಬಹುದಾಗಿದೆ.
 ಇಲಾಖೆಯ ಎಇಇ ಚಂದ್ರಶೇಖರ್ ಮಾತನಾಡಿ, ಚಾನಲ್‌ನಲ್ಲಿ ನೀರು ಪೋಲು ಸಾಮಾನ್ಯವಾಗಿದ್ದು ಭಾನುವಾರ ಗೇಟ್ ದುರಸ್ತಿಗೊಳಿಸಿದ್ದು ಹೆಚ್ಚಿನ ರೀತಿಯಲ್ಲಿ ಪೋಲು ಸಾದ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಕಿರಿಯ ಅಭಿಯಂತರ ಜತೆ ಚರ್ಚಿಸಿ ಮಂಗಳವಾರ ಖುದ್ದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement