ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋಮಾಳ ಭೂಮಿ ತೆರವಿಗೆ ಆಗ್ರಹಿಸಿ ಮನವಿ

Lingaraj Badiger
Updated On : 2 Jul 2013, 10:39 am

ಸಾಗರ: ಗೋಮಾಳಕ್ಕೆ ಮೀಸಲಾಗಿರಿಸಿದ್ದ ಜಮೀನಿನಲ್ಲಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸೋಮವಾರ ಆವಿನಹಳ್ಳಿ ಬೋಳಗುಡ್ಡೆ ನಿವಾಸಿಗಳು ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಆವಿನಹಳ್ಳಿ ಗ್ರಾಪಂನ ಬೋಳಗುಡ್ಡೆ ಸರ್ವೆ ನಂ. 92ರಲ್ಲಿ ಜಾನುವಾರು ಮೇವಿಗಾಗಿ ಮುಫತ್ತಾಗಿ ಕಾಯ್ದಿತಿಸಿದ್ದ 381.05 ಎಕರೆ ಜಮೀನಿನಲ್ಲಿ ಕುರುವರಿ ನಿವಾಸಿಗಳಾದ ರಾಮಚಂದ್ರಪ್ಪ ಬಿನ್ ಸುಬ್ಬನಾಯ್ಕ, ಉಮೇಶ್, ಘನರಾಜ, ಸೀತಾರಾಮ, ರಾಮಚಂದ್ರಪ್ಪ, ಸುರೇಶ್ ಬಿನ್ ನಂಜಪ್ಪ, ಲಕ್ಷ್ಮೀಕಾಂತ ಬಿನ್ ಮಂಜಪ್ಪ ಎಂಬವರು ಅಕ್ರಮವಾಗಿ ಅಗಳ ತೋಡಿಸಿ, ಮರಗಳನ್ನು ಕಡಿದು, ಪರಿಸರ ನಾಶ ಮಾಡಿದ್ದಾರೆ. ಜೊತೆಗೆ 100ಕ್ಕೂ ಹೆಚ್ಚು ಎಕರೆ ಜಮೀನನ್ನು ಬಲವಂತವಾಗಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಒತ್ತುವರಿದಾರರಲ್ಲಿ ಒಬ್ಬರಾದ ಗ್ರಾಪಂ ಸದಸ್ಯ ಘನರಾಜ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಅಕ್ರಮ ಒತ್ತುವರಿಗೆ ಸಂಬಂಧಪಟ್ಟಂತೆ ಗ್ರಾಮಸ್ಥರು 2010ರಿಂದಲೂ ಪ್ರತಿಭಟನೆ ನಡೆಸುತ್ತಾ ಬಂದಿದ್ದು ತಹಸೀಲ್ದಾರರಿಗೆ ಜಾಗ ತೆರವಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಯಾವುದೋ ಪ್ರಭಾವಕ್ಕೆ ಒಳಗಾಗಿ ಈತನಕ ಜಾಗ ತೆರವುಗೊಳಿಸುವ ಕೆಲಸ ಮಾಡಿಲ್ಲ. ಅಧಿಕಾರ ಬಲ, ಹಣಬಲದಿಂದ ಸರ್ಕಾರಿ ಗೋಮಾಳದ ಜಮೀನು ಕಬಳಿಸಿರುವ ತಪ್ಪಿಸ್ತರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಶೋಕ್, ಎಂ. ರಾಜು ಪಟೇಲ್, ಎ.ಎಸ್. ಹಸೈನರ್, ಬಸಪ್ಪ ಕಿಪ್ಪಡಿ, ತಿಮ್ಮಪ್ಪ, ಪುಟ್ಟಸ್ವಾಮಿ, ಮಂಜಪ್ಪ, ಗಣೇಶ್, ಶೇಷಗಿರಿ, ಗಿರಿಜಮ್ಮ, ಗಂಗೆ, ಜಯಮ್ಮ, ಪಾರ್ವತಿ, ಸಾವಿತ್ರಮ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement