ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡೆಂಘೀ ಪೀಡಿತರಿಗೆ ಉಚಿತ ಪ್ಲೇಟ್‌ಲೆಡ್

Lingaraj Badiger
Updated On : 2 Jul 2013, 10:43 am

ಶಿವಮೊಗ್ಗ: ಡೆಂಘೀ ಬಂದವರು ಯಾವ ಕಾರಣಕ್ಕೂ ಪ್ಲೇಟ್‌ಲೆಡ್ ಕೊರತೆಯಿಂದ ಬಳಲಬಾರದು. ಈ ಕಾರಣದಿಂದ ಯಾರ ಸಾವೂ ಆಗಬರಾದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 86 ಕೇಂದ್ರಗಳನ್ನು ತೆರೆಯಲಾಗಿದೆ. ಡೆಂಘೀ ಪೀಡಿತರಿಗೆ ಉಚಿತವಾಗಿ ಪ್ಲೇಟ್‌ಲೆಡ್ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು, ಮೊಟ್ಟ ಮೊದಲು ಸರ್ಕಾರಿ ಕಟ್ಟಡ ಹಾಗೂ ಜಾಗಗಳ ಸ್ವಚ್ಛತೆಗೆ ಸೂಚನೆ ನೀಡಲಾಗಿದೆ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇತರರಿಗೆ ಈ ಕಟ್ಟಡಗಳು ಮಾದರಿಯಾಗಿರಬೇಕು ಎಂದು ಹೇಳಿದರು.
ಲೆಕ್ಕ ಮಾಹಿತಿ: ಡೆಂಘೀ ಡೆತ್ ಆಡಿಟಿಂಗ್ ಕಮಿಟಿಯನ್ನು ರಾಜ್ಯಮಟ್ಟದಿಂದ ಹಿಡಿದು ವಾರ್ಡ್ ಮಟ್ಟದ ವರೆಗೆ ರಚಿಸಲಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರ ಮಾಹಿತಿಯನ್ನು ಈ ಸಮಿತಿಯು ಕ್ರೋಢೀಕರಿಸಲಿದೆ ಎಂದು ಸಚಿವ ಖಾದರ್ ಹೇಳಿದರು.
ಮುಂದಿನ ವರ್ಷದಿಂದ ಜನವರಿ ತಿಂಗಳಿಂದಲೇ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಲಾಗುವುದು. ವ್ಯಾಪಕ ಪ್ರಚಾರ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಬ್ಬಂದಿ ಕೊರತೆ: ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ಹಾಗೂ ಕಿರಿಯ ವೈದ್ಯರು ಸೇರಿದಂತೆ ಸುಮಾರು 2,500 ಹುದ್ದೆ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಇವರಿಗೆ ಇನ್ನೂ ನೇಮಕಾತಿ ಆದೇಶ ನೀಡಿಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ಅನ್ವಯವಾಗುವ ಕಲಂ 371 ಜಾರಿಯಾಗಿದ್ದರಿಂದ ತಾಂತ್ರಿಕ ತೊತೊಂದರೆ ಉಂಟಾಗಿತ್ತು. ಸದ್ಯವೇ ನೀಡಲಾಗುವುದು ಎಂದರು. ಇರುವವರೇ ಸಮರ್ಥವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್  ಸೇರಿದಂತೆ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement