ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ
ತೀರ್ಥಹಳ್ಳಿ: ಚುನಾಯಿತ ಸದಸ್ಯರ ಸದಸ್ಯತ್ವ ರದ್ಧು ಮಾಡುವುದು ಪ್ರಜಾತಂತ್ರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಸಿದ್ದರಾಮಣ್ಣ ಹೇಳಿದರು.
ಈ ಬಗ್ಗೆ ಪ್ರತಿಭಟನಾ ಸಮಾವೇಶವನ್ನು ಜುಲೈ 8 ರಂದು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ 93ರ ತಿದ್ದುಪಡಿ ವಿದೇಯಕದ ವಿರುದ್ಧ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ವಿರುದ್ಧ ಮತ ಚಲಾಯಿಸಿದ್ದೇವೆ. ವಿಧಾನಸಭೆಯಲ್ಲಿ ವಿರೋಧವಿದ್ದರೂ ಧ್ವನಿಮತದಲ್ಲಿ ಅಂಗೀಕರಿಸಲಾಗಿದೆ. ಈ ತಿದ್ದುಪಡಿ ವಿದೇಯಕ ಗ್ರಾಪಂ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ ಹಕ್ಕಿಗೆ ಚ್ಯುತಿ ತರುವಂತಾಗಿದೆ ಎಂದು ಹೇಳಿದರು.
ಶಾಸಕ, ಸಂಸದ, ಜಿಪಂ ಸದಸ್ಯರು, ಗ್ರಾಪಂ ಸದಸ್ಯರನ್ನು ಆಯ್ಕೆ ಮಾಡುವ ರೀತಿ ಒಂದೇ ರೀತಿಯ ಮತದಾರರು. ಎಲ್ಲಾ ಸದಸ್ಯರನ್ನೂ ಚುನಾವಣಾ ಆಯೋಗವೇ ನೆಡೆಸುವಂತಾಗಿದೆ. ಹಾಗಿದ್ದಮೇಲೆ ಗ್ರಾಪಂ ಚುನಾಯಿತ ಸದಸ್ಯರ ಮೇಲೆ ತಿದ್ದುಪಡಿ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಈ ತಿದ್ದುಪಡಿ ವಿದೇಯಕನ್ನು ಹಿಂತಗೆದುಕೊಳ್ಳವಂತೆ ಮಾಡಲು ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ವಿಧಾನಸಭಾ ಮಾಜಿ ಸದಸ್ಯ ಆರಗ ಜ್ಞಾನೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಸಿ.ಬಿ. ಈಶ್ವರ್, ಜಿಪಂ ಸದಸ್ಯ ಎಲ್ಲಪ್ಪ ಇದ್ದರು.