ಶಾಲೆಗಳಲ್ಲಿ ಇನ್ನು ವಿಟಮಿನ್ ಮಾತ್ರೆ: ಸಚಿವ ಖಾದರ್
ಶಿವಮೊಗ್ಗ: ರಕ್ತಹೀನತೆಯನ್ನು ನಿವಾರಿಸಲು ಮುಂದಿನ ತಿಂಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಫಾಲಿಕ್ ಆಸಿಡ್ ಒಳಗೊಂಡ ಕಬ್ಬಿಣದ ಅಂಶವಿರುವ ಮಾತ್ರೆಯನ್ನು ವಾರಕ್ಕೊಮ್ಮೆ ನೀಡಲಾಗುವುದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಖಾದರ್, 'ಪೋಲಿಯೋ ನಿರ್ಮೂಲನೆ ಮಾಡಿದಂತೆ ಮುಂದಿನ 10 ವರ್ಷದಲ್ಲಿ ರಕ್ತಹೀನತೆ ಕಾಯಿಲೆಯನ್ನು ನಿವಾರಣೆ ಮಾಡಲಾಗುವುದು' ಎಂದರು. ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಿದ್ದರೆ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಚಿವ ಖಾದರ್ ಎಚ್ಚರಿಕೆ ನೀಡಿದರು.