ಚೆಸ್ ಪಂದ್ಯಕ್ಕೆ ಪ್ರೋತ್ಸಾಹ ಧನ ನೀಡಲು ಮನವಿ
ಕ.ಪ್ರ.ವಾರ್ತೆ, ಭದ್ರಾವತಿ, ಜು.2
ಪಟ್ಟಣದ ತಾಲೂಕು ಚೆಸ್ ಸಂಸ್ಥೆ ಹಾಗೂ ಎಂ.ಪಿ.ಎಂ ಚೆಸ್ ಕ್ಲಬ್ ಹಲವಾರು ಚೆಸ್ ಪಂದ್ಯಾವಳಿ ಆಯೋಜಿಸುವುದರೊಂದಿಗೆ ಚೆಸ್ ತರಬೇತಿ ಶಿಬಿರವನ್ನೂ ಆಯೋಜಿಸುತ್ತಿದ್ದು, ಇದರ ಅಭಿವೃದ್ಧಿಗೆ ಹಾಗೂ ಪಂದ್ಯಾವಳಿ ಆಯೋಜನೆಗೆ ನಗರಸಭೆಯಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸುವುದಾಗಿ ನಗರಸಭಾ ಸದಸ್ಯ ಆರ್. ಮಹೇಶ್ ತಿಳಿಸಿದರು.
ಅವರು ಶನಿವಾರ ಭದ್ರಾವತಿ ತಾಲೂಕು ಚೆಸ್ ಸಂಸ್ಥೆ ಹಾಗೂ ಎಂ.ಪಿ.ಎಂ ಚೆಸ್ ಕ್ಲಬ್ ಆಯೋಜಿಸಿದ್ದ ಕ್ಷಿಪ್ರ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡ್ದರು.
ಎಂಪಿಎಂ ನಿವೃತ್ತ ಉದ್ಯೋಗಿ ಎನ್. ಚಂದ್ರಪ್ಪ ಸುಲೋಚನಮ್ಮ ಸ್ಮರಣಾರ್ಥ ಚೆಸ್ ಪಂದ್ಯಾವಳಿಯನ್ನು ಮುಂದೆಯೂ ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು. ಇಂದು ರವೀಂದ್ರನ್ ಉಪಸ್ಥಿತರಿದ್ದರು.
ವಾಣಿ ಪಿ. ರವಿನಾಯ್ಡು ಪ್ರಾರ್ಥಿಸಿದರು. ಜಿ.ಎಸ್. ನಾಗರಾಜ್ ಸ್ವಾಗತಿಸಿದರು. ಎಸ್.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಆರ್. ಲೋಕನಾಥ್ ಕಾರ್ಯಕ್ರಮ ನಿರೂಪಿಸಿದರು. ಆರ್. ಉಮೇಶ್ ವಂದಿಸಿದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮೈಸೂರು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಮತ್ತು ಕಾರ್ಮಿಕ ಕಲ್ಯಾಣ ಪ್ರಬಂಧಕ ಜಿ.ಎ.ಷಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬೆಂಗಳೂರಿನ ದಕ್ಷಿಣ ರೇಲ್ವೆಯ ಜೆ. ಕುಮಾರವೇಲು, ತಾಲೂಕು ಚೆಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆರ್. ಉಮೇಶ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಂ.ಪಿ.ಎಂ ಚೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ವಿ. ತಿಪ್ಪೇಸ್ವಾಮಿ ಹಾಗೂ ಕುಮಾರವೇಲು ಬಹುಮಾನ ವಿತರಿಸಿದರು. ವಾಣಿ ರವಿನಾಯ್ಡು ಪ್ರಾರ್ಥಿಸಿದರು. ಬಿ.ಸಿ. ಪ್ರಸಾದ್ ಸ್ವಾಗತಿಸಿದರು.
ಆರ್. ಲೋಕನಾಥ್ ನಿರೂಪಿಸಿದರು. ಎನ್. ಕಾಂತರಾಜ್ ವಂದಿಸಿದರು.
ಬಹುಮಾನ ವಿಜೇತರು
ಮುಕ್ತ ಚದುರಂಗ ವಿಭಾಗ: ರಕ್ಷಿತ್ ಆರ್.ಉಮೇಶ್, ನಾಗಕಿರಣ್, ದೇವಿಪ್ರಸಾದ್.
ಪ್ರೌಢಶಾಲಾ ಬಾಲಕರು: ನಿಖಿಲ್ ಆರ್.ಉಮೇಶ್, ನಿತಿನ್, ನಿಖಿಲ್ ಡಿ.ಜೆ.
ಪ್ರೌಢಶಾಲಾ ಬಾಲಕಿಯರ ವಿಭಾಗ: ಚೇತನಾ ಆರ್.ಆಚಾರ್ಯ, ರಕ್ಷಾ ಅಸೂಂಡಿ, ಕೀರ್ತನಾ.
ಹಿರಿಯ ಪ್ರಾ.ಶಾಲಾ ಬಾಲಕರ ವಿಭಾಗ: ಪನ್ನಾಗ್ ಕುಮಾರ್, ತೇಜಸ್, ಸಂಜಯ್.
ಹಿರಿಯ ಪ್ರಾ.ಶಾಲಾ ಬಾಲಕಿಯರ ವಿಭಾಗ: ಸರಳ, ಪೂಜಾಶ್ರೀ ವಿ, ಸಂಜನಾ.
ಕಿರಿಯ ಪ್ರಾ. ಶಾಲಾ ಬಾಲಕರ ವಿಭಾಗ: ಪ್ರಣಿತ್ ಕಸ್ತೂರಿ, ಧನುಶ್ ಶೆಟ್ಟಿ, ಪ್ರಯಾಗ್
ಕಿರಿಯ ಪ್ರಾ.ಶಾಲಾ ಬಾಲಕಿಯರ ವಿಭಾಗ: ಸಿಂಚನ ಪಿ. ರಾವ್