ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

Lingaraj Badiger
Updated On : 3 Jul 2013, 11:03 am

ಸೊರಬ: ಪ್ರವಾಹದಿಂದಾಗಿ ಮನೆ, ಮಠ ಕಳೆದುಕೊಂಡು ನಿರ್ಗತಿಕರಾಗಿರುವ ಉತ್ತರಾಖಂಡದ ನೆರೆ ಸಂಸ್ರಸ್ತರಿಗೆ ಇಲ್ಲಿನ ರಾಸ್ವಸೇಸಂ, ವೈಜಯಂತಿ ಜೇಸೀಸ್, ಲಯನ್ಸ್‌ಕ್ಲಬ್ ಹಾಗೂ ವಿವಿಧ ಸಂಘ, ಸಂಸ್ಥೆಗಳವರು ಮಂಗಳವಾರ ಪರಿಹಾರ ನಿಧಿ ಸಂಗ್ರಹಿಸಿದರು.
ಉತ್ತರಾಖಂಡದಲ್ಲಾದ ದುರಂತ ದೇಶಕ್ಕೆ ಬಂದಿರುವ ಗಂಡಾಂತರ. ಈಗ ಅಲ್ಲಿನವರಿಗೆ  ಸಾಂತ್ವನಕ್ಕಿಂತ, ನೆರವು ಅಗತ್ಯ, ಬದುಕು ಕಟ್ಟಿಕೊಳ್ಳಲಾಗದಷ್ಟು ಅಶಕ್ತರಾಗಿರುವ ಸಂತ್ರಸ್ತರಿಗೆ ನೆರವು ನೀಡೋಣ ಬನ್ನಿ ಎಂದು ಘೋಷಿಸುವ ಮೂಲಕ ವಿವಿಧ ಸಂಘಟನೆಗಳು ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಪರಿಹಾರ ನಿಧಿ ಸಂಗ್ರಹಿಸಿದರು.
ರಾಸ್ವಸೇಸಂ ಜಿಲ್ಲಾ ಕಾರ್ಯವಾಹ ರಾಜಾರಾಂ, ತಾಲೂಕು ಕಾರ್ಯವಾಹ ಶ್ರೀಧರ್ ನಿಸರಾಣಿ, ಪ್ರಮುಖರಾದ ಅಚ್ಯುತ್ ರಾವ್, ಗೋಪಿನಾಥ್ ಗೋಖಲೆ, ಮಹೇಶ್ ಗೋಖಲೆ, ಸುಧಾಕರ ಭಾವೆ, ನಗರ ಪ್ರಮುಖರಾದ ಎಚ್.ಎಸ್. ಮಂಜಪ್ಪ, ಪಾಣಿ ರಾಜಪ್ಪ, ರಾಜುಗೌಡ ಹೊಸಬಾಳೆ, ಶಿವಾನಂದ್, ಜೇಸಿಸ್‌ನ ಷಣ್ಮುಖಾಚಾರ್, ಧರ್ಮಾಚಾರ್, ಪಾಣಿ ಶಿವಾನಂದ್, ಪಿಗ್ಮಿ ಪ್ರಶಾಂತ್, ಎಂ.ಕೆ. ಯೋಗೇಶ್ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement