ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಚಿವನಾಗಲು ಎಲ್ಲರ ಸಹಕಾರ ಕಾರಣ: ಕಿಮ್ಮನೆ

Lingaraj Badiger
Updated On : 3 Jul 2013, 11:02 am

ತೀರ್ಥಹಳ್ಳಿ,:  ನಾನಿಂದು ಸಚಿವನಾಗಲು ನನ್ನ ಹೋರಾಟ, ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಮನೆಯವರ ಸಹಕಾರವೇ ಮುಖ್ಯ ಕಾರಣ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.   
ತಾಲೂಕು ಕಾಂಗ್ರೆಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಸಚಿವರು,  ನನ್ನ ರಾಜಕೀಯ ಬದಕಿನಲ್ಲಿ ಸಾಕಷ್ಟು ಕಳೆದುಕೊಂಡಿದ್ದು, ರಾಜಕೀಯ ಹೋರಾಟಕ್ಕೆ ಪತ್ನಿ ಹಾಗೂ ಕುಟುಂಬದವರ ಸಹಕಾರ ಬಹಳವಿದೆ, ನನ್ನ ಕುಟುಂಬದ ಹಣವನ್ನು ರಾಜಕೀಯ ಹೋರಾಟದ ಬದುಕಿಗೆ ಹಾಕಿದ್ದೇನೆ,  ಎಂದೂ ದುಂದು ವೆಚ್ಚ ಮಾಡಿಲ್ಲ ಎಂದರು.
ಪ್ರಭಾವತಿ ಶಾಮಣ್ಣ,  ತಾಪಂ ಅಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ಮೀನಾಕ್ಷಿ ರಾಮಪ್ಪ, ಕುಸುಮ ಕೃಷ್ಣಮೂರ್ತಿ, ಜಿಪಂ ಸದಸ್ಯೆ ಶೃತಿ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ಸಿನ ವಿಜಯಲಕ್ಷ್ಮಿ ಪಾಟೀಲ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement