ಇಂದಿನಿಂದ ಪದವಿ ಕಾಲೇಜು ಪ್ರವೇಶಾತಿ
ಸಾಗರ: ನೂತನವಾಗಿ ಆರಂಭಗೊಳ್ಳಲಿರುವ ಪದವಿ ಕಾಲೇಜಿನ ಪ್ರವೇಶಾತಿ ಜು. 5 ರಿಂದ ಪ್ರಾರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಕುವೆಂಪು ವಿವಿ ಸಂಯೋಜನಾ ಸಮಿತಿ ಸ್ಥಳ ಪರಿಶೀಲನೆ ನಡೆಸಿತು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಯೋಜನಾ ಸಮಿತಿ ಅಧ್ಯಕ್ಷ ಪ್ರೊ. ಟಿ.ಆರ್. ಮಂಜುನಾಥ್, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಟ್ಟಡ ಸಂಯುಕ್ತ ಪದವಿ ಕಾಲೇಜು ಆರಂಭಕ್ಕೆ ಸೂಕ್ತವಾಗಿದೆ. ಪ್ರಥಮ ಹಂತದಲ್ಲಿ ಪ್ರಥಮ ವರ್ಷದ ಬಿ.ಎ. ಹಾಗೂ ಬಿ.ಕಾಂ. ತರಗತಿಗಳನ್ನು ಪ್ರಾರಂಭಿಸಲು ಅಗತ್ಯವಾದ ಕೊಠಡಿಗಳು ಕಾಲೇಜಿನಲ್ಲಿ ಲಭ್ಯವಿದೆ.