ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತರಬೇತಿಗಳು ಉಪಯೋಗವಾಗಲಿ

Lingaraj Badiger
Updated On : 5 Jul 2013, 11:16 am

ಶಿವಮೊಗ್ಗ: ತರಬೇತಿ ಪಡೆದರಷ್ಟೇ ಸಾಲದು. ಅದರಿಂದ ಒಂದಷ್ಟು ಆದಾಯ ಗಳಿಸುತ್ತೇನೆ ಎನ್ನುವ ಮನಸ್ಥಿತಿ ನಿಮ್ಮದಾಗಿರಬೇಕು. ಮನಸ್ಸಿದ್ದಲ್ಲಿ ದುಡಿಮೆಗೆ ಹಲವಾರು ಮಾರ್ಗಗಳಿವೆ. ನಿಮಗೆ ಆಸಕ್ತಿ ಇರುವ ಕಲಿಕೆಯನ್ನು ಪಡೆದುಕೊಂಡು ಯಶಸ್ವೀ ಫಲಾನುಭವಿಗಳಾಗಬೇಕು ಎಂದು ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ಎಸ್.ವೈ. ಅರುಣಾದೇವಿ ಹೇಳಿದರು.
 ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜನಶಿಕ್ಷಣ ಸಂಸ್ಥೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬ್ಯುಟೀಕಲ್ಚರ್ ಅಂಡ್ ಹೆಲ್ತ್‌ಕೇರ್ ತರಬೇತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ತರಬೇತಿ ಉದ್ಘಾಟಿಸಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ರಿಸರ್ವ್ ಪೋಲಿಸ್ ಇನ್ಸ್‌ಪೆಕ್ಟರ್ ಮಂಜುನಾಥ, ಇಲ್ಲಿ ಸಿಕ್ಕ ಅವಕಾಶಗಳನ್ನು ಯಾವುದೇ ಅಳುಕಿಲ್ಲದೆ ಉಪಯೋಗಿಸಿಕೊಂಡರೆ ಸಮಾಜದಲ್ಲಿ ಉನ್ನತವಾದ ಹೆಸರನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ಗಫಾರ್, ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತರಬೇತಿ ನೀಡುತ್ತಿರುವ ಜನ ಶಿಕ್ಷಣ ಸಂಸ್ಥೆಯ ವೃತ್ತಿ ಕೌಶಲ್ಯ ತರಬೇತಿಗಳನ್ನು ಪಡೆದು ಸಬಲರಾಗಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಪ್ರಭಾಕರ್ ಇದ್ದರು. ಕವಿತಾ ಸ್ವಾಗತಿಸಿದರು. ಜನ ಶಿಕ್ಷಣ ಸಂಸ್ಥೆಯ ಸಹಕಾರ್ಯಕ್ರಮಾಧಿಕಾರಿ ಎಂ. ಸುಮನ ವಂದಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement