ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಣ್ಣಿನ ಪರೀಕ್ಷೆ ಅವಶ್ಯಕ: ಅಮೃತ

Lingaraj Badiger
Updated On : 5 Jul 2013, 11:17 am

ಸೊರಬ: ನಾವು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶ ನೀಡಲು ಮಣ್ಣಿನ ಪರೀಕ್ಷೆ ಅತ್ಯವಶ್ಯಕ ಎಂದು ಆನವಟ್ಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಜಿ. ಅಮೃತ ಸಲಹೆ ನೀಡಿದರು.
ಹುಣಸವಳ್ಳಿ ಗ್ರಾಮಸ್ಥರ ಜಮೀನುಗಳಿಗೆ ಭೇಟಿ ನೀಡಿ ಕೃಷಿಕರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಬತ್ತದ ನಾಟಿಗೆ ಯೋಗ್ಯ ವಾತಾವರಣವಿದೆ ಎಂದು ಹೇಳಿದರು.
ಆಗಾಗ್ಗೆ ಮಳೆ ಬಿಡುವು ನೀಡಿ, ಬಿಸಿಲು ಬೀಳುವ ವೇಳೆಯಲ್ಲಿ ಅಥವಾ ಮಳೆ ಹೆಚ್ಚಾದಲ್ಲಿ ಬತ್ತವೂ ಸೇರಿದಂತೆ, ಜೋಳ, ಶೇಂಗಾ ಮುಂತಾದ ಬೆಳೆಗಳು ಕಾಂಡಕೊರಕ, ಬೂದಿರೋಗ, ಚುಕ್ಕಿ ರೋಗ ಮುಂತಾದ ವ್ಯಾಧಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳ ಸಂಪರ್ಕದಲ್ಲಿದ್ದು, ಸಮರ್ಪಕ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಅರ್ಹ ಫಲಾನುಭವಿಗಳು ಅವುಗಳ ಲಾಭ ಪಡೆದುಕೊಳ್ಳಿ ಎಂದ ಅವರು, ರೋಗ ಲಕ್ಷಣ, ಪರಿಹಾರೋಪಾಯಗಳ ಕುರಿತಂತೆ ವಿವರಿಸಿದರು. ಡಿ. ಶಿವಣ್ಣ, ಲೋಕಪ್ಪ, ನಾಗಪ್ಪ, ಮೈಲಾರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement