ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇನ್ನೂ ಇಳಿಯದ ಪ್ರವಾಹ ನೀರು

Lingaraj Badiger
Updated On : 6 Jul 2013, 11:02 am

ಸಾಗರ: ತಾಲೂಕಿನಲ್ಲಿ ಮಳೆಯ ಅಬ್ಬರ ಸಂಪೂರ್ಣ ಕಡಿಮೆಯಾಗಿದೆ. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ತಾಳಗುಪ್ಪ ಹೋಬಳಿಯ ಹತ್ತಾರು ಗ್ರಾಮಗಳ ಕೃಷಿಭೂಮಿಯಲ್ಲಿ ನಿಂತಿರುವ ಪ್ರವಾಹದ ನೀರು ಇನ್ನೂ ಇಳಿದಿಲ್ಲ.
ಒಮ್ಮೆ ನೆರೆ ಬಂದರೆ ಕನಿಷ್ಠ ಹತ್ತು ದಿನಗಳ ಕಾಲ ನೀರು ಇಳಿಯುವುದಿಲ್ಲ ಎನ್ನುತ್ತಾರೆ ಸ್ಥಳೀಯ ರೈತರು. ಬೀಸನಗದ್ದೆ ಗ್ರಾಮದ ಸುತ್ತ ನಿಂತಿರುವ ನೀರು ಕೂಡ ಇಳಿದಿಲ್ಲ. ಗ್ರಾಮವಾಸಿಗಳು ಸಂಪರ್ಕಕ್ಕೆ ನಾಡದೋಣಿಯನ್ನು ಬಳಸುತ್ತಿದ್ದಾರೆ.
ನಾಗರಿಕ ಸಂಪರ್ಕ ಕಳೆದುಕೊಂಡಿರುವ ಬೀಸನಗದ್ದೆ ಗ್ರಾಮಕ್ಕೆ ಮಾಧ್ಯಮದವರು ಭೇಟಿ ನೀಡಿದಾಗ ತಾಳಗುಪ್ಪ ಹೋಬಳಿಯನ್ನು ಶಾಶ್ವತವಾಗಿ ನೆರೆಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಸರ್ಕಾರ ಈ ಭಾಗದ ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೈದೂರು ಗ್ರಾಮ ಪಂಚಾಯ್ತಿ ಸದಸ್ಯ ಮಹಾಬಲೇಶ್ವರ ಜೆ.ನಾಯ್ಕ್ ಒತ್ತಾಯಿಸಿದರು.
ಮಳೆಗಾಲದ ಮೂರು ತಿಂಗಳು ಬೀಸನಗದ್ದೆ ಗ್ರಾಮ ಪೂರ್ಣ ಜಲಾವೃತವಾಗಿದೆ. ಇಲ್ಲಿನ 24 ಕುಟುಂಬಗಳು ಜನಸಂಪರ್ಕವನ್ನೇ ಕಳೆದುಕೊಳ್ಳುತ್ತಿದ್ದು, ಈ ಭಾಗಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಹಿಂದಿನಿಂದಲೂ ಮನವಿ ಸಲ್ಲಿಸುತ್ತಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಬಹುತೇಕ ರೈತರು ಎರಡರಿಂದ ಮೂರು ಎಕರೆ ಜಮೀನು ಹೊಂದಿದ್ದಾರೆ. ಸರ್ಕಾರ ಅವರ ಕುಟುಂಬಕ್ಕೆ ಎಪಿಎಲ್ ಪಡಿತರ ಚೀಟಿ ನೀಡಿದೆ. ಆದರೆ ಮಳೆಗಾಲದಲ್ಲಿ ಈ ಜನರು ಬಿತ್ತನೆ ಮಾಡಿರುವ ಬೀಜವನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ.
ಸರ್ಕಾರ ಈ ಭಾಗದ ಎಲ್ಲಾ ರೈತರಿಗೆ ಬಿಪಿಎಲ್ ಕಾರ್ಡ್ ನೀಡುಬೇಕು ಎಂದು ಆಗ್ರಹಿಸಿದರು. ಪಿಡಿಒ ಮೋಹನ್, ಕಂದಾಯ ಇಲಾಖೆಯ ರಾಘವೇಂದ್ರ ಹಾಜರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement