ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಮೆಡ್ ಕೆ ಪ್ರವೇಶ: ಎಬಿವಿಪಿ ಖಂಡನೆ

Lingaraj Badiger
Updated On : 6 Jul 2013, 11:03 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.5
ವೃತ್ತಿ ಶಿಕ್ಷಣ ಕಾಲೇಜುಗಳ ಸರ್ಕಾರಿ ಸೀಟು(ಕೆಇಎ ಮುಖಾಂತರ) ಹಂಚಿಕೆ ಪ್ರಕ್ರಿಯೆಯೆಗಿಂತ ಮುಂಚಿತವಾಗಿ ಕಾಮೆಡ್ ಕೆ ಪ್ರವೇಶ ಪ್ರಕ್ರಿಯೆ ಪ್ರಾರಂಭ ಮಾಡಿರುವುದಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡನೆ ವ್ಯಕ್ತಪಡಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ವಿದ್ಯಾರ್ಥಿಗಳ ಸೀಟುಗಳ ಪಟ್ಟಿಯನ್ನು ತಡವಾಗಿ ಪ್ರಕಟಿಸಿ ಬಡ- ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.
ಶುಲ್ಕವನ್ನು ಏರಿಸುವುದಿಲ್ಲ, ಸೀಟನ್ನು ಕಾಮೆಡ್ ಕೆಗೆ ಬಿಟ್ಟುಕೊಡುವುದಿಲ್ಲ, ನಾವು ವಿದ್ಯಾರ್ಥಿಗಳ ಪರ ಎಂದು ಹೇಳಿಕೊಂಡ ಸರ್ಕಾರ ಇದೀಗ ಕಾಮೆಡ್‌ಕೆಗೆ ಹಿಂಬಾಗಿಲಿನಿಂದ ಬೆಂಬಲಿಸಿರುವುದು ಖಂಡನೀಯ. ವೈದ್ಯ ವಿದ್ಯಾರ್ಥಿಗಳಿಗೆ ಕಾಮೆಡ್‌ಕೆ ಕೌನ್ಸೆಲಿಂಗ್ ನಡೆಸಲಿಕ್ಕೆ ಏಕೆ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ಸರ್ಕಾರ ಈ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.
ಈಗಾಗಲೇ ನಡೆಸಿರುವ ಕೌನ್ಸೆಲಿಂಗ್‌ನ್ನು ರದ್ದು ಮಾಡಿ, ಸರ್ಕಾರವು ಸರ್ಕಾರಿ ಸಿಇಟಿ ಕೌನ್ಸೆಲಿಂಗ್ ನಡೆಸಿದ ನಂತರ ಅದನ್ನು ಮುಂದುವರಿಸಲು ಆದೇಶಿಸಬೇಕೆಂದು ಎಬಿವಿಪಿ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದರೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅನ್ಯಾಯ: ಒಂದು ವೇಳೆ ಕಾಮೆಡ್ ಕೆ ಕೌನ್ಸೆಣಲಿಂಗ್ ಅನ್ನು ಮುಂದುವರಿಸಿದಾಗ ಅದು ಸರ್ಕಾರಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕಾಮೆಡ್-ಕೆ ಈಗಾಗಲೇ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಹಣವನ್ನು ಸರ್ಕಾರಿ ಸೀಟು ಸಿಕ್ಕಿದ ನಂತರ ವಾಪಸ್ಸು ಮಾಡುತ್ತೇವೆ ಎಂಬ ಭರವಸೆಯನ್ನು ಕಾಮೆಡ್ ಕೆ ನೀಡಿದೆ. ಇದು ಕೇವಲ ಭರವಸೆಯಾಗಿಯೇ ಉಳಿಯುತ್ತದೆ.
ಇದರ ಮೂಲಕ ಕಾಮೆಡ್ ಕೆ ಹೆಚ್ಚುವರಿ ಹಣವನ್ನು ಸಂಗ್ರಹಿಸುವ ಸಾಧ್ಯತೆ ಇರುವುದರಿಂದ, ಕಾಮೆಡ್ ಕೆ ನಡೆಸುವ ಕೌನ್ಸೆಲಿಂಗ್ ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ನಿಲ್ಲಿಸುವ ಆಗ್ರಹಿಸುತ್ತದೆ ಎಂದವರು ಹೇಳಿದ್ದಾರೆ.
ಅನುಮಾನ: ಈಗಾಗಲೇ ರಾಜ್ಯದ 11 ವೈದ್ಯ ಕಾಲೇಜುಗಳ ಸೀಟು ಪಟ್ಟಿಯನ್ನು ಪ್ರಕಟಿಸದಿರುವುದು ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತಂದಿಟ್ಟಿದೆ.
ಸರ್ಕಾರವು ಎಮ್.ಸಿ.ಐ ಜೊತೆ ಕಾಲೇಜಿನ ಮಾನ್ಯತೆ ಬಗ್ಗೆ ಮೊದಲೇ ಚರ್ಚೆ ನಡೆಸದಿರುವುದು ಸಹ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸುವುದಾಗಿ ಎಬಿವಿಪಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement