ನಾಳೆ ಪಾರಂಪರಿಕ ವೈದ್ಯರ ಪ್ರತಿಭಟನೆ
ಶಿವಮೊಗ್ಗ: ಗ್ರಾಮಾಂತರ ಪ್ರದೇಶದಲ್ಲಿ ತಲತಲಾಂತರದಿಂದ ಸೇವೆ ಸಲ್ಲಿಸುತ್ತಿರುವ ಹಲವಾರು ಪಾರಂಪರಿಕ ಹಾಗೂ ಅನುಭವಿ ವೈದ್ಯರಿಗೆ ಆರೋಗ್ಯ ಇಲಾಖೆಯು ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಜಿಲ್ಲಾ ಸಂಘ ಆರೋಪಿಸಿದ್ದು, ಇದನ್ನು ವಿರೋಧಿಸಿ ಜು.8ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದೆ.
ಚಿತ್ರಕಲಾ ಸ್ಪರ್ಧೆ
ಶಿವಮೊಗ್ಗ: ಮಲ್ನಾಡ್ ಕ್ರಿಯೇಟಿವ್ ಫೌಂಡೇಶನ್ ಮತ್ತು ಚುಂಚಾದ್ರಿ ಮಹಿಳಾ ವೇದಿಕೆ ಆಶ್ರಯದಲ್ಲಿ 6ರಂದು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, 1.30ಕ್ಕೆ ಶರಾವತಿ ನಗರದ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ನಡೆಯುವುದು ಎಂದು ವೇದಿಕೆ ಅಧ್ಯಕ್ಷೆ ಶಾಂತಾ ಸುರೇಂದ್ರ ತಿಳಿಸಿದ್ದಾರೆ. ವಿವರಗಳಿಗಾಗಿ- 9845948118.