ಪ್ರಕೃತಿ ವಿಕೋಪ ಸಹಾಯವಾಣಿ ಕೇಂದ್ರ ಆರಂಭ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.5
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆ ಬೀಳಬಹುದಾದ ಸಂಭವವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ 2 ಉಪವಿಭಾಗಾಧಿಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಿಲಾಗಿದೆ.
ಈ ಸಹಾಯವಾಣಿ ಕೇಂದ್ರವು ಸರ್ಕಾರಿ ರಜಾದಿನವನ್ನು ಒಳಗೊಂಡು ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಪ್ರಕೃತಿ ವಿಕೋಪ, ನೆರೆ ಹಾವಳಿ ಇತ್ಯಾದಿಗಳಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ದೂರು ದಾಖಲಿಸಿ ಪರಿಹಾರಕಾರ್ಯಕ್ಕೆ ನೆರವಾಗಬಹುದು.
ದೂರವಾಣಿ: ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ 08182-271101, 1077, ಉಪವಿಭಾಗಾಧಿಕಾರಿಗಳ ಕಚೇರಿ -222204, ಉಪವಿಭಾಗಾಧಿಕಾರಿಗಳ ಕಚೇರಿ ಸಾಗರ-08183-226601, ತಹಶೀಲ್ದಾರ್ ಶಿವಮೊಗ್ಗ-08182-279312, ಭದ್ರಾವತಿ ತಹಶೀಲ್ದಾರ್-08282-267283, ತೀರ್ಥಹಳ್ಳಿ ತಹಶೀಲ್ದಾರ್-08184-272241, ಸಾಗರ ತಹಶೀಲ್ದಾರ್-08187-222239, ಸೊರಬ ತಹಶೀಲ್ದಾರ್-08184-272241, ಶಿಕಾರಿಪುರ ತಹಶೀಲ್ದಾರ್-08187-222239 ಹಾಗೂ ಹೊಸನಗರ ತಹಶೀಲ್ದಾರ್-08185-221239ನ್ನು ಸಂಪರ್ಕಿಸಬಹುದು.
ಪ್ರಕೃತಿ ವಿಕೋಪ ನಿರ್ವಹಣೆ ಯೋಜನೆಯಡಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರ ಶಾಖೆಯ ಕಾರ್ಯಾಲಯದಲ್ಲಿ ಪ್ರತ್ಯೇಕ ದೂರವಾಣಿ ಸಂಪರ್ಕವನ್ನು ಅಳವಡಿಸಲಾಗಿದೆ. ದೂರವಾಣಿ ಸಂಪರ್ಕ ಸಂಖ್ಯೆ 1077 ಮತ್ತು 08182-271101ಆಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ದೂರವಾಣಿ ಕರೆಗಳ ಸೂಕ್ತ ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.