ರಾಷ್ಟ್ರೀಯ ಮಟ್ಟದ ಕರಾಟೆ: ಶಿವಮೊಗ್ಗದ ನಾಲ್ವರಿಗೆ ಬಹುಮಾನ
ಶಿವಮೊಗ್ಗ: ಉತ್ತರಖಂಡ ರಾಜ್ಯದ ನೈನಿತಾಲ್ನಲ್ಲಿ ಆಯೋಜಿಸಿದ್ದ 17ನೇಯ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ 4 ಕರಾಟೆ ಪಟುಗಳು ಬಹುಮಾನ ಪಡೆದಿದ್ದಾರೆ.
ಭಾರತೀಯ ಕ್ರೀಡಾ ಸಂಸ್ಥೆ, ಒಲಂಪಿಕ್ ಸಂಸ್ಥೆ, ನೈನಿತಾಲ್ ಕರಾಟೆ ಸಂಸ್ಥೆ, ಅಖಿಲ ಭಾರತೀಯ ಕರಾಟೆ, ಇಂಡಿಯಾ ಇವರ ಸಹಯೋಗದೊಂದಿಗೆ ನೈನಿತಾಲ್ ಕ್ಲಬ್ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ಧ 4 ಶಿವಮೊಗ್ಗದ ಕರಾಟೆ ಪಟುಗಳು 3 ಬೆಳ್ಳಿಯ ಪದಕ, 1 ಕಂಚಿನ ಪದಕ ಪಡೆದಿದ್ದಾರೆ.
ಸೀನಿಯರ್ ವಿಭಾಗ ಫೈಟಿಂಗ್ನಲ್ಲಿ 56-60 ಕೆಜಿ 18 ವರ್ಷ ಮೇಲ್ಪಟ್ಟು ಶಿವಮೊಗ್ಗದ ರಾಜ ಆಗ್ರೋ ಸರ್ವೀಸ್ ಸೆಂಟರ್ನ ಉದ್ಯೋಗಿ ಸುರೇಶ್ ಎ. ಬೆಳ್ಳಿಪದಕ ಗಳಿಸಿರುತ್ತಾರೆ. ವಿಜಯಕುಮಾರ್ ಎಂ. ಫೈಟಿಂಗ್ 51 ರಿಂದ 55 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ. 18 ವರ್ಷದೊಳಗಿನ ವಿಭಾಗದಲ್ಲಿ ಪ್ರವೀಣ್ಕುಮಾರ್ ಆರ್. 81-85 ಕೆಜಿ ವಿಭಾಗ ಬೆಳ್ಳಿ ಪದಕ ಗಳಿಸಿರುತ್ತಾರೆ. ಮಹಿಳಾ ವಿಭಾಗದಲ್ಲಿ ಸೌಜನ್ಯ ಎಸ್. ರಾವ್ ಇವರು 41-50 ಕೆಜಿಯ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.