ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕ್ರಿಕೆಟ್ ಬೆಟ್ಟಿಂಗ್: 8 ಮಂದಿ ಬಂಧನ

Mainashree
Updated On : 7 Jul 2013, 11:20 am

ಶಿವಮೊಗ್ಗ: ಹುಬ್ಬಳ್ಳಿ ಮತ್ತು ಬಳ್ಳಾರಿಯ ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾಗಳಿಗೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದ 8 ಜನರನ್ನು ನಗರದ ದೊಡ್ಡಪೇಟೆ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
 ಗಾಂಧಿ ಬಜಾರ್‌ನ ವಿಕ್ರಮ ಸಿಂಗ್, ಮುಖೇಶ್, ಚೇತನ್ ಕುಮಾರ್ ಹಾಗೂ ಎನ್.ಟಿ. ರಸ್ತೆಯ ನಿವಾಸಿ ಯುವರಾಜ, ಮುಖೇಶ್ ಬಾಬಾ, ಸಂತೋಷ್ ಶೆಟ್ಟಿ ಮತ್ತು ಶಿವಮೊಗ್ಗ ನಗರಸಭೆ ಸದಸ್ಯೆ ಗೌರಿ ಅವರ ಪತಿ ಶ್ರೀನಾಥ್ ಅವರನ್ನು ಬಂಧಿಸಲಾಗಿದ್ದು, ಮಾಜಿ ಶಾಸಕರೊಬ್ಬರ ಪುತ್ರ ಬಸವ ತಲೆಮರೆಸಿಕೊಂಡಿದ್ದಾನೆ.
ಹಣ, ವಾಹನ ವಶ: ಬಂಧಿತರಿಂದ 4 ಲಕ್ಷ ನಗದು, ಒಂದು ಮಾರುತಿ- 800, ಒಂದು ಸ್ಕೋಡಾ ಕಾರು, ಎರಡು ಬೈಕ್ ಹಾಗೂ ಹತ್ತಾರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
 ಬೆಟ್ಟಿಂಗ್ ದಂಧೆ ನಗರದಲ್ಲಿ ಹಲವಾರು ದಿನಗಳಿಂದ ನಡೆಯುತ್ತಿದ್ದು, ಖಚಿತ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಶುಕ್ರವಾರ ರಾತ್ರಿ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಚರಣೆಯಲ್ಲಿ ದೊಡ್ಡಪೇಟೆ ಠಾಣೆಯ ಪಿಎಸ್‌ಐ ಗಿರೀಶ್, ಶಶಿಕಾಂತ್, ಅಪರಾಧ ವಿಭಾಗದ ಸುಭಾಷ್ ಚಂದ್ರ, ಸಿಬ್ಬಂದಿ ಮದನ್, ಸತೀಶ್ ರಾಜ್, ಆರ್. ಮಂಜುನಾಥ್, ಲಿಂಗೇಗೌಡ, ಶಿವಪ್ಪ, ಫಾರೂಕ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement