ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿಟಿ ಸುದ್ದಿ

Mainashree
Updated On : 7 Jul 2013, 11:21 am

ಇಂದು ವಿದ್ಯುತ್‌ವ್ಯತ್ಯಯ
ಶಿವಮೊಗ್ಗ: ಆಲ್ಕೋಳದ 11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎ.ಎಫ್-6 ಮತ್ತು 7 ನಲ್ಲಿರುವ ದುರಸ್ಥಿ ಕಂಬಗಳನ್ನು ಬದಲಾವಣೆ ಮಾಡುವುದರಿಂದ ಜುಲೈ 7ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ನಗರದ ವಿವಿದೆಢೆ ವಿದ್ಯು ತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಕೈಗಾರಿಕಾ ವಸಾಹತು, ಶರಾವತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಚೆಸ್ ತರಗತಿ
ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಜುಲೈ 9ರಿಂದ ಫೆ.28ರವರೆಗೆ(2014)ಚೆಸ್ ಕೋರ್ಸ್ ಆರಂಭಿಸಿದ್ದು,   ಮಂಗಳವಾರ ಅಥವಾ ಬುಧವಾರ, ಗುರುವಾರ, ಶುಕ್ರವಾರದಂದು ಬೆಳಿಗ್ಗೆ 7ರಿಂದ 8ಗಂಟೆವರೆಗೆ ತರಗತಿಗಳು ನಡೆಯಲಿದೆ ಎಂದು ಸಂಸ್ಥೆಯ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ. ವಿವರಗಳಿಗಾಗಿ- 9945809662.
ಪ್ರವೇಶಾವಕಾಶ
ಶಿವಮೊಗ್ಗ: ಡಿವಿಎಸ್ ಸಂಜೆ ಕಾಲೇಜು ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಎ ತರಗತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜುಲೈ 13ರೊಳಗೆ ದ್ವಿತೀಯ ಪಿಯುಸಿ, 2ವರ್ಷಗಳ ಐಟಿಐ, ಜೆಓಸಿ ಹಾಗೂ 3 ವರ್ಷಗಳ ಡಿಪ್ಲೋಮಾ ತರಗತಿಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 300 ದಂಡ ಶುಲ್ಕದೊಂದಿಗೆ ನೇರವಾಗಿ ಪ್ರವೇಶ ಪಡೆಯಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಿವರಗಳಿಗಾಗಿ- 08182-278531.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement