ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರಣ್ಯ ಭೂಮಿ ಸಾಗುವಳಿ ಮಾಡದಿರಿ

Lingaraj Badiger
Updated On : 8 Jul 2013, 11:03 am

ಕ.ಪ್ರ.ವಾರ್ತೆ  ಸೊರಬ  ಜು.7 ಬಗರ್ ಹುಕುಂ ಸಾಗುವಳಿ ವಿರುದ್ಧ ಕುರಿತು ಎದ್ದಿರುವ ಸಮರಕ್ಕೆ ಅಂಜುವ ಅವಶ್ಯಕತೆ ಇಲ್ಲ. ಹೊಸತಾಗಿ ಯಾರೂ ಸಹ ಅರಣ್ಯ ಭೂಮಿಯಾಗಲಿ, ಕಂದಾಯ ಭೂಮಿಯನ್ನಾಗಲೀ ಒತ್ತುವರಿ ಅಥವಾ ಬಗರ್ ಹುಕುಂ ಸಾಗುವಳಿ ಮಾಡಲು ಮುಂದಾಗಬೇಡಿ ಎಂದು ಶಾಸಕ ಮಧುಬಂಗಾರಪ್ಪ ಹೇಳಿದರು.
ಭಾನುವಾರ ಪಟ್ಟಣಕ್ಕೆ ಆಗಮಿಸಿ, ಸಾರ್ವಜನಿಕ ಕುಂದುಕೊರತೆ ಆಲಿಸಿದ ಅವರು, ನಂತರ ಮಾಧ್ಯಮದವರಂದಿಗೆ ಮಾತನಾಡಿದರು.
ಈ ಹಿಂದಿನಿಂದಲೂ ಭೂಮಿ ಇಲ್ಲದವರು ಅಥವಾ ಸಣ್ಣಪುಟ್ಟ ಜಮೀನು ಇರುವವರು ಬಗರ್ ಹುಕುಂ ಸಾಗುವಳಿಗೆ ಮಾಡಿದ್ದಾರೆ. ಅಂತವರಿಗೆ ಜಮೀನಿಲ್ಲದೆ ಬದುಕುವುದು ದುರ್ಬರವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿನಿಂದಲೂ ನಾನು ಬಗರ್ ಹುಕುಂ ಸಾಗುವಳಿದಾರರ ಪರವಾಗಿದ್ದು, ಸಾಗುವಳಿದಾರರನ್ನು ರಕ್ಷಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಸಾರ್ಕರಕ್ಕೆ ಒತ್ತಾಯ: ಈ ಕುರಿತು ಮುಂದಿನ ಅಧಿವೇಶನದಲ್ಲಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿದಂತೆ ತಿದ್ದುಪಡಿ ತರುವಂತೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯದ ನೂತನ ಬಜೆಟ್ ನಂತರ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಬಗರ್ ಹುಕುಂ  ಸೇರಿದಂತೆ ರಾಜ್ಯದ ಮತ್ತು ತಾಲೂಕಿನ ಹಲವು ಸಮಸ್ಯೆ ನೀಗಿಸುವ ಬಗ್ಗೆ  28 ಪ್ರಶ್ನೆಗಳನ್ನು ನೀಡಿದ್ದೇನೆ.  ಈ ಎಲ್ಲ ಪ್ರಶ್ನೆಗಳನ್ನು ಕೇಳಲು ಅವಕಾಶ ಸಿಗುವ ನಂಬಿಕೆ ಇದೆ, ಅಧಿವೇಶನದ ಎಲ್ಲ ದಿವಸವೂ ಹಾಜರಿದ್ದು, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ತಿದ್ದುಪಡಿ ಸರಿಯಲ್ಲ: ಸರ್ವೆ ಇತ್ಯಾದಿ ಮಾಡದೇ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತು ಕಂದಾಯ ಭೂಮಿಯನ್ನು ಅರಣ್ಯ ಎಂದು ತಿದ್ದುಪಡಿ ಮಾಡುತ್ತಿರುವುದು ಸರಿಯಲ್ಲ ಎಂದು ಖೇದ ವ್ಯಕ್ತಪಡಿಸಿದರು.
ತಾಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ, ಕಳಪೆ ಕಾಮಗಾರಿ ಮುಂತಾದ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅವರು, ಸಕ್ರಿಯ ಕಾರ್ಯ ನಿರ್ವಹಣೆಯೇ ಇವಕ್ಕೆಲ್ಲ ಸಮರ್ಪಕ ಉತ್ತರ ನೀಡಬಲ್ಲದು. ಈ ನಿಟ್ಟಿನಲ್ಲಿ ಕೆಲ ಕಾಮಗಾರಿ ಕುರಿತು ಖುದ್ದು, ಭೇಟಿ ನೀಡಿ ಪರಿಶೀಲಿಸುವ ಅಗತ್ಯವಿದೆ ಎಂದರು.
ಮಳೆಹಾನಿಯ ಕುರಿತಾದ  ಸಂಪೂರ್ಣ ವಿವರಗಳನ್ನು ತರಿಸಿಕೊಳ್ಳಲಾಗಿದೆ. 2 ದಿನ ಕ್ಷೇತ್ರದಲ್ಲಿದ್ದು, ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಲಾಗುವುದು.
 ಹಾನಿಗೊಳಗಾದ ಪೈರು ಇತ್ಯಾದಿಗೆ ಪರಿಹಾರ ಒದಗಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ತಾಪಂ ಅಧ್ಯಕ್ಷ ಸದಾನಂದಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್. ಗಣಪತಿ, ಉಪಾಧ್ಯಕ್ಷ ಅತಿಕುರ್ ರೆಹಮಾನ್, ಎಂ.ಡಿ. ಶೇಖರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement