ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಡುಕೋಣ ದಾಳಿ: ಬೆಳೆ ನಷ್ಟ

Lingaraj Badiger
Updated On : 8 Jul 2013, 11:12 am

ಸಾಗರ: ತಾಲೂಕಿನ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ನೀಚಡಿ ಆಚೆದಿಂಬದ ಸತ್ಯನಾರಾಯಣ ಎಂಬುವವರ ತೋಟಕ್ಕೆ ಕಾಡುಕೋಣಗಳ ಗುಂಪು ದಾಳಿ ಮಾಡಿ ಅಪಾರ ಹಾನಿ ಉಂಟಾಗಿದೆ.
ಶುಕ್ರವಾರ ರಾತ್ರಿ ಏಕಾಏಕಿ ದಾಳಿಯಿಟ್ಟ 7ಕ್ಕೂ ಹೆಚ್ಚು ಕಾಡುಕೋಣಗಳ ಗುಂಪು ಅಡಕೆ ಸಸಿ, ನೀರಾವರಿಗೆ ಅಳವಡಿಸಿದ್ದ ಪೈಪ್‌ಲೈನ್, ಅಡಕೆ ಮರಗಳನ್ನು ನಾಶ ಮಾಡಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ಸ್ಥಳಕ್ಕೆ ಚೋರಡಿ ವಿಭಾಗದ ವಲಯಾರಣ್ಯಾಧಿಕಾರಿ ರವಿಕುಮಾರ್ ಸಿಬ್ಬಂದಿ ಭೇಟಿ ನೀಡಿ ಪಟಾಕಿ ಸಿಡಿಸಿ ಕಾಡುಕೋಣಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾನಿಗೊಳಗಾದ ತೋಟದ ಮಾಲೀಕರಿಗೆ ಹಾನಿ ಸಂಬಂಧ ವರದಿ ನೀಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ರವಿಕುಮಾರ್ ತಿಳಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ: ಪ್ರಕರಣ ದಾಖಲು
ಭದ್ರಾವತಿ: ಜಟ್‌ಪಟ್ ನಗರ ವಾಸಿ ನಾಗರಾಜ (49) ರಾಜ್ಯ ಸಾರಿಗೆ ಬಸ್ ನಿಲ್ದಾಣದ ಬಳಿ ಪರವಾನಗಿ ಇಲ್ಲದೇ ಮದ್ಯ
ಮಾರಾಟ ಮಾಡುತ್ತಿದ್ದುದು ಕಂಡುಬಂದಿದ್ದು ನ್ಯೂಟೌನ್ ಪೊಲೀಸರು ಆರೋಪಿಯಿಂದ ವಿವಿಧ ಕಂಪನಿಯ 1200 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಭದ್ರಾವತಿ ತಾಲೂಕಿನ ಉಕ್ಕುಂದ ಗ್ರಾಮದ ಕೆ. ಲಿಂಗರಾಜು (37) ಉಕ್ಕುಂದ ಗ್ರಾಮದ ಭೈರವೇಶ್ವರ ಪ್ರಾವಿಜನ್ ಸ್ಟೋರ್‌ನಲ್ಲಿ ಪರವಾನಗಿ ಇಲ್ಲದೇ ಅಕ್ರಮ ಮದ್ಯ ಮಾರಾಟ
ಮಾಡುತ್ತಿದ್ದು ಈತನಿಂದ ವಿವಿಧ ಕಂಪನಿಯ 1850 ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement